ತುಂಗಾ ನದಿಗೆ ಬಾಗಿನ ಅರ್ಪಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಯ ನೀರು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ಗುರುವಾರ ಸಂಜೆ ರಾಜ್ಯ ಸರ್ಕಾರದ ಗೃಹಸಚಿವರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ತುಂಗಾ ನದಿಗೆ ಬಾಗಿನ ಅರ್ಪಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮಳೆ ಎಷ್ಟು ಬೇಕಾದರೂ ಬರಲಿ, ನದಿ ಉಕ್ಕಿ ಹರಿಯಲಿ ಅದು ಸಮೃದ್ಧಿಯ ಸಂಕೇತ ಆದರೆ ಎಲ್ಲೂ ಕೂಡ ಹನಿಯಾಗದ ರೀತಿಯಲ್ಲಿ ಕಾಪಾಡು ಎಂದು ರಾಮೇಶ್ವರನಲ್ಲಿ ಬೇಡಿ ಬಾಗಿನ ಅರ್ಪಿಸಿದ್ದೇವೆ…