Headlines

ಸಾಗರದ ಗುಡ್ಡೆಕೌತಿ ಬಳಿ ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವತಿ ಸಾವು.!! ಇದು ಆತ್ಮಹತ್ಯೆಯೋ ?ಅಪಘಾತವೋ?


ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗುಡ್ಡೆಕೌತಿ ಬಳಿ ಮಧ್ಯಾಹ್ನ 12:30 ರ ವೇಳೆಗೆ ಮೈಸೂರು- ತಾಳಗುಪ್ಪ ರೈಲಿಗೆ ಅಂದಾಜು 18 ವರ್ಷದ ಯುವತಿ ರೈಲಿಗೆ  ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನ ಸ್ಥಳದಲ್ಲಿ ರೈಲ್ವೆ ಇಲಾಖೆಯ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾಗರ ಗ್ರಾಮಾಂತರ ಪೊಲೀಸರು ಧಾವಿಸಿದ್ದಾರೆ.

ಇನ್ನೂ ಯುವತಿಯ ಬಗ್ಗೆ ಮಾಹಿತಿ ತಿಳಿದಿಲ್ಲ ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಪ್ರಶ್ನೆಗೆ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ.
ಮೈಸೂರು to ತಾಳಗುಪ್ಪ ಗಾಡಿ ಸಂಖ್ಯೆ 16206 ರೈಲು Runover at km 140/8-9 ಈ ಸ್ಥಳದಲ್ಲೇ ಘಟನೆ ನಡೆದಿದೆ.



*ವರದಿ:  ಪವನ್ ಕುಮಾರ್ ಕಠಾರೆ*

About The Author

Leave a Reply

Your email address will not be published. Required fields are marked *