Ripponpete | ರಾಷ್ಟ್ರ ಮಟ್ಟದ ‘ನೆಟ್ ಬಾಲ್’ ಪಂದ್ಯಾವಳಿಗೆ ಆಲುವಳ್ಳಿಯ ವಿಕ್ರಮ್ ರಾಜಾಮಣಿ ಆಯ್ಕೆ
ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಯುವಕ ವಿಕ್ರಮ್ ರಾಜಾಮಣಿ ಕಿರಿಯರ ರಾಷ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.
ಆಲುವಳ್ಳಿ ಗ್ರಾಮದ ನಿವಾಸಿಗಳಾದ ತೇಜಸ್ವಿ ಆಲವಳ್ಳಿ ಮತ್ತು ಶ್ವೇತಾ ದಂಪತಿಗಳ ಪುತ್ರನಾದ ವಿಕ್ರಮ್ ರಾಜಾಮಣಿ ಪ್ರಸ್ತುತ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತಿದ್ದಾನೆ.
ಜನವರಿ 25 ರಿಂದ 28 ರವರೆಗೆ ಮಧ್ಯಪ್ರದೇಶದಲ್ಲಿ ನಡೆಯುವ 36ನೇ ಕಿರಿಯರ ರಾಷ್ಟ್ರೀಯ ನೆಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅದ್ಬುತ ಸಾಧನೆಗೈದಿದ್ದಾನೆ.
ರಿಪ್ಪನ್‌ಪೇಟೆಯ ಬಸವೇಶ್ವರ ವಿದ್ಯಾಲಯದಲ್ಲಿ 1 ರಿಂದ 7 ನೇ ತರಗತಿ ಹಾಗೂ ರಾಮಕೃಷ್ಣ ವಿದ್ಯಾಲಯದಲ್ಲಿ 8 ರಿಂದ 10 ರವರೆಗೂ ವ್ಯಾಸಾಂಗ ಮಾಡಿರುವ ವಿಕ್ರಮ್ ಪ್ರಸ್ತುತ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತಿದ್ದಾನೆ…
ಗ್ರಾಮೀಣ ಪ್ರದೇಶದ ಯುವಕ ನೆಟ್ ಬಾಲ್ ಕ್ರೀಡೆಯಲ್ಲಿ ಅಭೂತಪೂರ್ವ ಸಾಧನೆಗೈಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮಧ್ಯಪ್ರದೇಶದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭಾರತ ತಂಡವನ್ನು ಪ್ರತಿನಿಧಿಸಲಿ ಎಂದು ಪೋಸ್ಟ್ ಮ್ಯಾನ್ ನ್ಯೂಸ್ ಆಶಿಸುತ್ತದೆ..