Konanduru | ರಾಷ್ಟ್ರದ ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು

Konanduru | ರಾಷ್ಟ್ರದ ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು

ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು

ರಿಪ್ಪನ್‌ಪೇಟೆ : ಧಾರ್ಮಿಕ ಮತ್ತು ಚಾರಿತ್ರಿಕ ಉತ್ತೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ ಭಗವೇ ಅಗಿದೆ. ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮ ಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ಆಯೋಜಿಸಲಾದ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜಕ್ಕೆ ಮಠಗಳು ಹತ್ತಿರವಾಗಬೇಕು ಮಠಗಳು ಸಮಾಜಮುಖಿ ಕಾರ್ಯದೊಂದಿಗೆ ಭಕ್ತರ ಹೃದಯ ಸಿಂಹಾಸನದಲ್ಲಿ ನೆಲಸುವಂತಾದಾಗ ಮಾತ್ರ ಮಠಗಳ ಶ್ರೀಮಂತವಾಗುವುದರಲ್ಲಿ ಕೋಣಂದೂರು ಮಠ ಸಾಕ್ಷಿಕರಿಸುತ್ತದೆಂದರು.


ಶಾಸಕ ಆರಗ ಜ್ಞಾನೇಂದ್ರ ಶಿವಲಿಂಗೇಶ್ವರ ನಿತ್ಯ ಪಂಚಾಂಗವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೇವಲ ಕೆಲವೇ ವೀರಶೈವ ಲಿಂಗಾಯತ ಮಠಗಳು ನಮ್ಮ ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದರೂ ಕೂಡಾ ಮೂರು ವೀರಶೈವ ಮಠಗಳಿದ್ದರೂ ಕೂಡಾ ಜಾತಿ ಬೇದಭಾವನೆ ತೊರದೆ ಎಲ್ಲ ಧರ್ಮದವರನ್ನು ಸಾಮರಸ್ಯದಿಂದ ಕಾಣುವ ಮೂಲಕ ಸಮಾಜ ಧರ್ಮ ಸಂಘಟನೆಯನ್ನು ಮಾಡುವುದರೊಂದಿಗೆ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣುವಂತೆ ವೀರಶೈವ ಲಿಂಗಾಯಿತ ಮಠಗಳು ಮಾಡುವುದರೊಂದಿಗೆ ನಮ್ಮ ಈ ಬೆಳವಣಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆಂದರು.

ಇದೇ ಸಂದರ್ಭದಲ್ಲಿ ಮಠದಿಂದ ಕೊಡಮಾಡುವ ಶ್ರೀಶಿವಲಿಂಗಶ್ರೀ ಪ್ರಶಸ್ತಿಗೆ ಭಾಜನರಾದ ನಾಟಿ ವೈದ್ಯ ಶಿವಣ್ಣಗೌಡ್ರು ಮತ್ತು ಅಕ್ಷಯ ಬ್ಯಾಂಕ್ ಅಧ್ಯಕ್ಷ ದಿನೇಶ್ ತಟ್ಟೆಕೊಪ್ಪ ಹಾಗೂ ರಾಣೆಬೆನ್ನೂರು ಸೋಮಶೇಖರ ಈರಪ್ಪ ಹಿರೇಬಿದರಿ ಹಾಗೂ ರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿ ಬಾಗವಹಿಸಿದ ಕುಕ್ಕಳಲೇ ಶ್ರೀ ಜ್ಞಾನ ನಾಗಭೂಷಣ ಗುರುರಕ್ಷೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಧರ್ಮ ಸಮಾರಂಭದಲ್ಲಿ ಕ್ಯಾಸನೂರು ತೊಗರ್ಸಿ ಮಠದ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಸದಾಶಯ ನುಡಿ ಸೇವೆ ನೀಡಿದರು.

ಸಭೆಯಲ್ಲಿ ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ತೊಗರ್ಸಿ ಮಹಾಂತದೇಶಿಕೇಂದ್ರ ಶಿವಾಚಾರ್ಯರು, ಜಡೆಮಠದ ಮಹಾಂತ ಮಹಾಸ್ವಾಮಿಗಳು, ಮುಷ್ಟೂರು ರುದ್ರಮುನಿಶಿವಾಚಾರ್ಯರು, ಜಡೆಮಠದ ಅಮರೇಶ್ವರ ಶಿವಾಚಾರ್ಯರು, ಗುತ್ತಲ ಕಲ್ಮಠದ ಪ್ರಭು ಮಹಾಸ್ವಾಮಿಗಳು, ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಕೋಣಂದೂರು ಕೆ.ಆರ್.ಪ್ರಕಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಈಶ್ವರಪ್ಪಗೌಡ, ವಾಗೀಶ್‌ಸ್ವಾಮಿ, ಮುರುಗೇಂದ್ರ ತ್ಯಾರಂದೂರು, ಬೆಳಕೋಡು ಹಾಲಸ್ವಾಮಿಗೌಡರು ದೇವೇಂದ್ರಪ್ಪಗೌಡ ನೆವಟೂರು, ಚಂದ್ರಶೇಖರಪ್ಪಗೌಡ, ರಾಜಣ್ಣ ಹಂಸಬಾವಿ ಇನ್ನಿತರರು ಹಾಜರಿದ್ದರು.

ಕು.ಮೇಘನಾ ಕಾಳಶೆಟ್ಟಿಕೊಪ್ಪ ಪ್ರಾರ್ಥಿಸಿದರು. ಬೆಳಕೋಡು ಹಾಲಸ್ವಾಮಿಗೌಡರು ಸ್ವಾಗತಿಸಿದರು.

ಜೆ.ಜಿ.ಸದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಗೀತಾ ವಿ.ಮಠದ ಶಿವಯೋಗಿ ನಿರೂಪಿಸಿದರು. ಹೊನ್ನಾಳಿ ಡಾ.ವಿದುಷಿ ಪ್ರತಿಮ ನಿಜಗುಣ ಶಿವಯೋಗಿಸ್ವಾಮಿ ಇವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *