ಪುನೀತ್ ರಾಜ್‍ಕುಮಾರ್ ವೃತ್ತದ 70 ಅಡಿಯ ಧ್ವಜಸ್ಥಂಭ ಕೆಡವಿ ವಿಕೃತ ಮೆರೆದ ಕಿಡಿಗೇಡಿಗಳು | ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಹೊಸನಗರ : ಪಟ್ಟಣದ ನಗರ ರಸ್ತೆಯ ರಾಜ್ಯ ಹೆದ್ದಾರಿ 766 ಸಿ ಮೆಸ್ಕಾಂ ಕಛೇರಿ ಎದುರಿನ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿದ್ದ 70 ಅಡಿ ಎತ್ತರದ ಧ್ವಜಸ್ಥಂಭವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಹೊಸನಗರದ ಮಿತ್ರಕೂಟ ಕನ್ನಡ ಸಂಘ ಹಾಗೂ ರಾಜರತ್ನ ಡಾ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದವರು ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ 70 ಗಾಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿದ್ದರು. ರಾಷ್ಟ್ರೀಯ ದಿನಾಚರಣೆಗಳಲ್ಲಿ ರಾಷ್ಟ್ರಧ್ವಜ ಹಾಗೂ ಇತರೆ ದಿನಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು ಮಂಗಳವಾರ ರಾತ್ರಿ ತೀವ್ರ ವರ್ಷಧಾರೆ ನಡುವೆಯೂ ಯಾರೋ ಕಿಡಿಗೇಡಿಗಳು ಧ್ವಜಸ್ತoಭವನ್ನು ಧ್ವಂಸಗೊಳಿಸಿರುವ ಘಟನೆ ಸಂಭವಿಸಿದೆ.
ಈ ಘಟನೆ ಇಂದು ಬೆಳಿಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಇಂತಹ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಚಲನಚಿತ್ರ ಮೇರು ನಟ ಶಿವರಾಜಕುಮಾರ್ ರವರು ಹೊಸನಗರಕ್ಕೆ ಆಗಮಿಸಿದಾಗ ಈ ವೃತ್ತದಲ್ಲಿ ಇಳಿದು ಅಗಲಿದ ಸಹೋದರ ಡಾಕ್ಟರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದರು ಈ ಸಂದರ್ಭದಲ್ಲಿ ಈಗಿನ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಸಕರು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರು ಉಪಸ್ಥಿತರಿದ್ದರು.
ಹೊಸನಗರದ ರಸ್ತೆ ಅಗಲೀಕರಣ ಸಂಧರ್ಭದಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತವನ್ನು ಅಭಿವೃದ್ದಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಧ್ವಜ ಸ್ಥಂಭವನ್ನು ಧ್ವಂಸಗೈದಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಲಾಬೇಕೆಂದು ಸಾರ್ವಜನಿಕರು , ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.