ಬಗರ್ ಹುಕುಂ ಸಾಗುವಳಿ ಅರ್ಜಿದಾರರಿಗೆ ತಕ್ಷಣದಲ್ಲೇ ಸಾಗುವಳಿ ಚೀಟಿಯನ್ನು ನೀಡಿ : ಕಾಗೋಡು ತಿಮ್ಮಪ್ಪ

ಸಾಗರ :ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಪ್ರಕರಣಗಳ ಸಾಗುವಳಿ ಚೀಟಿಯನ್ನು ತಕ್ಷಣದಲ್ಲಿ ನೀಡುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ ವತಿಯಿಂದ ಸಾಗರ ತಹಶೀಲ್ದಾರ್ ರಿಗೆ ಮನವಿಯನ್ನು ಸಲ್ಲಿಸಿದರು.  ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಮಾಜಿ ಸಚಿವರು ಮಾಜಿ ವಿಧಾನಸಭಾ ಅಧ್ಯಕ್ಷರು ಆದ ಶ್ರೀ ಕಾಗೋಡು ತಿಮ್ಮಪ್ಪನವರು ಮಾತನಾಡುತ್ತಾ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ  ರೈತರ ಬಗರ್ ಹುಕುಂ ಜಮೀನು ಗಳಿಗೆ ಅರ್ಜಿ ಸಲ್ಲಿಸಿ ಸಾಕಷ್ಟು ಸಮಯ ಆದರೂ ಕೂಡ ಇದುವರೆಗೂ ಸಾಗುವಳಿ ಚೀಟಿಯನ್ನು ನೀಡಿಲ್ಲ ರೈತರು ಅತಂತ್ರ…

Read More

ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಸಾಗರ ಪ್ರಾಂತ್ಯ ವತಿಯಿಂದ ಭೂಮಿ ಮಂಜೂರಾತಿಗೆ ಆಗ್ರಹಿಸಿ ಮನವಿ:

ಸಾಗರ: ಸೈನಿಕರಾಗಿ ದೇಶದ ಗೌರವ ಪೂರ್ವಕ ಸೇವೆಯನ್ನು ನಿರ್ವಹಿಸಿ ಸೇನೆಯಿಂದ  ನಿವೃತ್ತಿಯಾದ ಮಾಜಿ ಯೋಧರಿಗೆ ವ್ಯವಸಾಯದ ಉದ್ದೇಶಕ್ಕೆ ಭೂ ಮಂಜೂರಾತಿ ಮಾಡಬೇಕೆಂದು ಆಗ್ರಹಿಸಿ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ವತಿಯಿಂದ ಸಾಗರ ಉಪ ವಿಭಾಗಾಧಿಕಾರಿಗಳ ಮುಖಾಂತರ  ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.      ಈ ಸಭೆಯ ನೇತೃತ್ವವನ್ನು ವಹಿಸಿದ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಭಾಷ್ ಚಂದ್ರ ತೇಜಸ್ವಿ ಮಾತನಾಡುತ್ತಾ ರಾಜ್ಯ ಸರ್ಕಾರದ ಆದೇಶವಿದ್ದರೂ ಭೂ ಮಂಜೂರಾತಿಗಾಗಿಅರ್ಜಿ ಸಲ್ಲಿಸಿದ ಸೈನಿಕರ ಅರ್ಜಿಗಳನ್ನು ಪುರಸ್ಕರಿಸದೆ ಕಾಲಹರಣ…

Read More

ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್: ವರದಿ ನೋಡಿ ತಕ್ಷಣ ಎಚ್ಚೆತ್ತ ಅಧಿಕಾರಿಗಳು:

ಸಾಗರ: ಕಳೆದ 3ದಿನಗಳ ಹಿಂದೆ ನಿಮ್ಮ ನೆಚ್ಚಿನ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಸಾಗರದ ಪೋಲಿಸ್ ಇಲಾಖೆಯ ವಸತಿಗೃಹಗಳು ಕಾಡಿನಂತಾಗಿವೆ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಸುದ್ದಿ ಪ್ರಸರಣದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೀಗ ಪೋಲಿಸ್ ವಸತಿಗೃಹಗಳಿಗೆ ಹೊಸ ಜೀವಕಳೆಯನ್ನು ನೀಡುತ್ತಿದ್ದಾರೆ.ಸುತ್ತಮುತ್ತಲ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಮುಂದೆ ಉಂಟಾಗುತ್ತಿದ್ದ ರೋಗರುಜಿನಗಳಿಗೆ ಇದೀಗ ಕಡಿವಾಣ ಹಾಕಿದಂತಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತ ಪೋಸ್ಟಮನ್ ನ್ಯೂಸ್ ತಂಡ ಅಧಿಕಾರಿಗಳನ್ನ ಎಚ್ಚೆತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದರಿಂದ ಪೊಲೀಸ್ ವಸತಿಗೃಹದ ಸುದ್ದಿಯನ್ನು ಬಿತ್ತರಿಸಿ ಅಧಿಕಾರಿಗಳು…

Read More

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಕಾಡಿನಂತಾಗಿದೆ ಸಾಗರದ ಪೊಲೀಸ್ ವಸತಿ ಗೃಹಗಳು:

ಸಾಗರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿತ್ತು.ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಇದೀಗ ಕಾಡಿನ ಮಧ್ಯೆ ಇದೆ ಎಂಬಂತಾಗಿದೆ ಕಾರಣ ಸುತ್ತಮುತ್ತಲು ಕಾಡಿನಂತೆ ವಸತಿಗೃಹದ ಅರ್ಧಮಟ್ಟಿಗೆ  ಬೆಳೆದಿರುವ ಗಿಡಗಂಟಿಗಳು. ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ವಸತಿಗೃಹಗಳ ಸೌಂದರ್ಯವೇ ಇದೀಗ ಪಾಳು ಬಿದ್ದಂತಿದೆ. ಸಾಗರದ ಹೃದಯ ಭಾಗದಲ್ಲಿ ಇರುವ ಈ ಪೊಲೀಸ್…

Read More

ತಾಳಗುಪ್ಪ: ಅರಣ್ಯೀಕರಣ ಮಾಡಿದ ಪ್ರದೇಶದಲ್ಲಿ ಘನತ್ಯಾಜ್ಯವಿಲೇವಾರಿ ಘಟಕಕ್ಕೆ ಗ್ರಾಮಸ್ಥರಿಂದ ವಿರೋಧ

 ಸಾಗರ: ಇಲ್ಲಿನ ತಾಳಗುಪ್ಪ ಹೋಬಳಿ ಕಾನಲೆ ಗ್ರಾಮದ ಸರ್ವೆ ನಂಬರ್  412 ರಲ್ಲಿ ಗ್ರಾಮಾಡಳಿತ  ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತಯಾರಿ ನಡೆ ಸಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಹಿಂಡಲೆಕೊಪ್ಪ ಗ್ರಾಮಸ್ಥರು ಆರೋಪಿಸಿದ್ದಾರೆ.  ಈಗಾಗಲೇ ಜಾಗವನ್ನು ಗುರುತುಪಡಿಸಿ ನೀಲ ನಕ್ಷೆ ತಯಾರಿಸಿದೆ‌. ಆದರೆ ಕಾನ್ಲೆ ಗ್ರಾಮ ಸರ್ವೆ ನಂಬರ್ 412ರಸರ್ಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಗುರುತಿಸಿರುವ ಜಾಗ ಹಿಂಡಲೇ ಕೊಪ್ಪ ಗ್ರಾಮದ ಕೂಗಳತೆಯ ದೂರದಲ್ಲಿ  ಇದ್ದು ಗ್ರಾಮಕ್ಕೆ ಅತ್ಯಂತ ಸಮೀಪವಿರುತ್ತದೆ. ಮತ್ತು ಈಗಾಗಲೇ ಅರಣ್ಯ ಇಲಾಖೆಯಿಂದ…

Read More

ಜುಲೈ 30 ರ ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಮಧುಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆ: ಅರ್ ಎಂ ಮಂಜುನಾಥ ಗೌಡ

ಸಾಗರ: ಸೊರಬದ ಮಾಜಿ ಶಾಸಕರಾದ ಮಧು ಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ ಗೌಡರವರು ಹೇಳಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜುಲೈ 30ರಂದು ಹುಬ್ಬಳ್ಳಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಮಧು ಬಂಗಾರಪ್ಪ ರವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ…

Read More

ಮುಖ್ಯಮಂತ್ರಿಗಳಿಂದ ಸಾಗರ ತಾಲ್ಲೂಕಿನಲ್ಲಿ 459.19 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ

ಸಾಗರ:ತಾಲ್ಲೂಕಿನ ಹಲವು ಕಾಮಗಾರಿಗಳಿಗೆ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಚಾಲನೆ ನೀಡಿದರು.   ಅವರು ಇಲ್ಲಿನ ಗಾಂಧಿಮಂದಿರದ ಹೊರಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.  ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ 155-00 ಕೋಟಿ ರೂಪಾಯಿಗಳು, ಜೋಗ ಅಭಿವೃದ್ಧಿ ಕಾಮಗಾರಿಗಳಿಗೆ 165-00ಕೋಟಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 (69) ತುಮಕೂರು ಹೊನ್ನಾವರ ರಸ್ತೆಯ ಕಿ.ಮೀ. 278 ರಿಂದ 286.40ರವರೆಗೆ ಸಾಗರ ನಗರ ವ್ಯಾಪ್ತಿಯಲ್ಲಿ…

Read More

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ:

ಸಾಗರ: ಇಲ್ಲಿನ ಗುಡ್ಡೆಕೌತಿ ಸಮೀಪದಲ್ಲಿ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಮಧ್ಯಾಹ್ನದ ವೇಳೆ ತಲೆಕೊಟ್ಟು ಸುಮಾರು 36 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತನ ವಿಳಾಸ ತಿಳಿದು ಬಂದಿಲ್ಲಾ. ಸಾಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್  ಮತ್ತು ಗ್ರಾಮಾಂತರ ಇನ್ಸ್ಪೆಕ್ಟರ್ ಗಿರೀಶ್ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಾಹಿತಿ: ಇಮ್ರಾನ್ ಸಾಗರ್

Read More

ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಧಾನವಾಗುತ್ತದೆ: ಬೇಳೂರು ಗೋಪಾಲಕೃಷ್ಣ

ಗಡಿಕಟ್ಟೆ: ಕಷ್ಟ ಎಲ್ಲಾರಿಗೂ ಇರುತ್ತದೆ ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಾಧಾನವಾಗುತ್ತದೆ ಎಂದು ಮಾಜಿ ಶಾಸಕರೂ,ಕೆ.ಪಿ.ಸಿ.ಸಿ. ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಲ್ಲಿನ ಗಡಿಕಟ್ಟೆಯ ಹಾವುಗೊಲ್ಲರ ಸುಮಾರು 50 ಕುಟುಂಬದ ಸದಸ್ಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಇಂತಹವರನ್ನು ನಿರ್ಲಕ್ಷಿಸಿರುವುದು ಖಂಡನೀಯ, ನಿಮ್ಮ ಸಂಕಷ್ಟದ ಜೊತೆ ಗೋಪಾಲಕೃಷ್ಣ ಬೇಳೂರು ಸದಾ ಇರುತ್ತಾರೆ ಎಂದರು.    ಈ ಸಂದರ್ಭದಲ್ಲಿ ರಂಜಿತ ರಾಧಾ ಗೋಪಾಲ ಕೃಷ್ಣ ಬೇಳೂರು, ತಾಲ್ಲೂಕು…

Read More