Headlines

ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಧಾನವಾಗುತ್ತದೆ: ಬೇಳೂರು ಗೋಪಾಲಕೃಷ್ಣ

ಗಡಿಕಟ್ಟೆ: ಕಷ್ಟ ಎಲ್ಲಾರಿಗೂ ಇರುತ್ತದೆ ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಾಧಾನವಾಗುತ್ತದೆ ಎಂದು ಮಾಜಿ ಶಾಸಕರೂ,ಕೆ.ಪಿ.ಸಿ.ಸಿ. ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಲ್ಲಿನ ಗಡಿಕಟ್ಟೆಯ ಹಾವುಗೊಲ್ಲರ ಸುಮಾರು 50 ಕುಟುಂಬದ ಸದಸ್ಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಇಂತಹವರನ್ನು ನಿರ್ಲಕ್ಷಿಸಿರುವುದು ಖಂಡನೀಯ, ನಿಮ್ಮ ಸಂಕಷ್ಟದ ಜೊತೆ ಗೋಪಾಲಕೃಷ್ಣ ಬೇಳೂರು ಸದಾ ಇರುತ್ತಾರೆ ಎಂದರು.   
ಈ ಸಂದರ್ಭದಲ್ಲಿ ರಂಜಿತ ರಾಧಾ ಗೋಪಾಲ ಕೃಷ್ಣ ಬೇಳೂರು, ತಾಲ್ಲೂಕು ಪಂಚಾಯತ ಸದಸ್ಯರಾದ ಸೋಮಶೇಖರ ಲಾವಿಗೆರೆ,  ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಬೇಳೂರು, ಗಣಪತಿ ಮಂಡಗಳಲೆ, ಮುಖಂಡರಾದ ವಿ. ಶಂಕರ್, ಸಂತೋಷ್ ಸದ್ಗುರು, ನಾಗರಾಜ ಸ್ವಾಮಿ, ಶ್ರೀದರ ಪಟೇಲ್, ಆನಂದ್, ಮಂಜು ಸಣ್ಣಕ್ಕಿ ರವಿ, ಅರುಣ, ವಿಜಯ್ ವಿಜೇಂದ್ರ, ಘಟಕದ ಅಧ್ಯಕ್ಷ ಅಬ್ಬು ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *