ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆ: ಶಾಸಕ ಹರತಾಳು ಹಾಲಪ್ಪ.
ರಿಪ್ಪನ್ ಪೇಟೆ : ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆಯಾಗಿದ್ದು. ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ,ದಾರಿದೀಪವಾಗಿ ಮುನ್ನಡೆಸಿದ ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಸಮಾಜ ಗೌರವಿಸುತ್ತದೆ ಎಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತರಾದ ಪ್ರೊ. ನಳಿನ್ ಚಂದ್ರ ಉಡುಪ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಆಯೋಜಿಸಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ಸಹ ಸಮಾಜವು…