ರಿಪ್ಪನ್ ಪೇಟೆ: ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ ಶಾಸಕರಾದ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದವರು,ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಆರಗ ಜ್ಞಾನೇಂದ್ರ ರವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಹೊಸನಗರ ತಾಲೂಕು ಬಿಜೆಪಿಯ ಉಪಾಧ್ಯಕ್ಷರಾದ ಕಲ್ಲೂರು ನಾಗೇಂದ್ರಪ್ಪ ಗೌಡ ಒತ್ತಾಯಿಸಿದ್ದಾರೆ.
ಹೊಸನಗರ ತಾಲೂಕು ಬಿಜೆಪಿ ಉಪಾಧ್ಯಕ್ಷರು:
ಕೊರೊನಾದಂಥ ಸಂಕಷ್ಟದ ವೇಳೆ ತಾಲೂಕಿನಲ್ಲಿ ಸುತ್ತಾಡಿ ಜನರ ಕಷ್ಟ ಆಲಿಸಿದ್ದಾರೆ. ಮಳೆ ಬಂದರೂ ಮಳೆಯಲ್ಲಿಯೇ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.ವಿಧ್ಯಾರ್ಥಿ ದೆಸೆಯಿಂದ ಹಿಡಿದು ಜನಸಂಘದ ಮೂಲಕ ಬಿಜೆಪಿ ಪಕ್ಷಕ್ಕಾಗಿ 45 ವರ್ಷಗಳಿಂದ ದುಡಿದಿದ್ದಾರೆ.ಸಂಘಟನ ಚತುರರಾಗಿ ಬಹಳಷ್ಟು ಕಾರ್ಯಕರ್ತರನ್ನು ಬೆಳೆಸಿದ ಹೆಗ್ಗಳಿಕೆ ಇವರದು.ತುಂಬಾ ಸ್ನೇಹಮಯಿ ವ್ಯಕ್ತಿತ್ವದ ಆರಗ ಜ್ಞಾನೇಂದ್ರ ರವರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಕಗ್ಗಲಿ ಲಿಂಗಪ್ಪ , ಜಂಬಳ್ಳಿ ಗಿರೀಶ್ ಇನ್ನಿತರರಿದ್ದರು.
:ರಿಪ್ಪನ್ ಪೇಟೆ ವರದಿ:
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..