ಸಾಗರ: ಇಲ್ಲಿನ ತಾಳಗುಪ್ಪ ಹೋಬಳಿ ಕಾನಲೆ ಗ್ರಾಮದ ಸರ್ವೆ ನಂಬರ್ 412 ರಲ್ಲಿ ಗ್ರಾಮಾಡಳಿತ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತಯಾರಿ ನಡೆ ಸಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಹಿಂಡಲೆಕೊಪ್ಪ ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೇ ಜಾಗವನ್ನು ಗುರುತುಪಡಿಸಿ ನೀಲ ನಕ್ಷೆ ತಯಾರಿಸಿದೆ. ಆದರೆ ಕಾನ್ಲೆ ಗ್ರಾಮ ಸರ್ವೆ ನಂಬರ್ 412ರಸರ್ಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಗುರುತಿಸಿರುವ ಜಾಗ ಹಿಂಡಲೇ ಕೊಪ್ಪ ಗ್ರಾಮದ ಕೂಗಳತೆಯ ದೂರದಲ್ಲಿ ಇದ್ದು ಗ್ರಾಮಕ್ಕೆ ಅತ್ಯಂತ ಸಮೀಪವಿರುತ್ತದೆ. ಮತ್ತು ಈಗಾಗಲೇ ಅರಣ್ಯ ಇಲಾಖೆಯಿಂದ ಅರಣ್ಯೀಕರಣ ಮಾಡಲಾಗಿದೆ ಅನೇಕ ಬೆಲೆ ಬಾಳುವ ಗಿಡ ಮರಗಳನ್ನು ನೆಡಲಾಗಿದೆ ಮತ್ತು ಈ ಯೋಜನೆಯಿಂದಾಗಿ ಗ್ರಾಮದ ನೈರ್ಮಲೀಕರಣ ಹದಗೆಡಲಿದ್ದು ಅನೇಕ ರೋಗ ರುಜಿನಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು ಇದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಸಾಗರದ ತಹಸೀಲ್ದಾರರಿಗೆ ಮನವಿಗಳನ್ನು ನೀಡಿರುತ್ತೇವೆ ಕೂಡಲೇ ಕ್ರಮ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಸಾಗರ ತಾಲೂಕು ಕಛೇರಿ ಮುಂಬಾಗದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಿಂಡಲೇ ಕೊಪ್ಪ ಗ್ರಾಮದ ರಮೇಶ್, ಪ್ರದೀಪ, ಮನೋಜ, ಮಂಜುನಾಥ ,ಪ್ರಮೋದ, ಚಂದ್ರಶೇಖರ, ಪಾಂಡ್ಯಪ್ಪ, ಮತ್ತು ಗ್ರಾಮ ಪಂಚಾಯತಿಯ ಸದಸ್ಯರಾದ ಜಾನಕಿ ರಾಮಕೃಷ್ಣ ಧರ್ಮಪ್ಪ ಹಾಜರಿದ್ದರು.
ವರದಿ : ಧರ್ಮರಾಜ್ ಸಾಗರ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..