WhatsApp Channel Join Now
Telegram Channel Join Now
ಸಾಗರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿತ್ತು.ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಇದೀಗ ಕಾಡಿನ ಮಧ್ಯೆ ಇದೆ ಎಂಬಂತಾಗಿದೆ ಕಾರಣ ಸುತ್ತಮುತ್ತಲು ಕಾಡಿನಂತೆ ವಸತಿಗೃಹದ ಅರ್ಧಮಟ್ಟಿಗೆ  ಬೆಳೆದಿರುವ ಗಿಡಗಂಟಿಗಳು.

ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ವಸತಿಗೃಹಗಳ ಸೌಂದರ್ಯವೇ ಇದೀಗ ಪಾಳು ಬಿದ್ದಂತಿದೆ.
ಸಾಗರದ ಹೃದಯ ಭಾಗದಲ್ಲಿ ಇರುವ ಈ ಪೊಲೀಸ್ ವಸತಿ ಗೃಹಗಳು ಇತರೆ ಇಲಾಖೆಗೆ ಮಾದರಿಯಾಗಿರಬೇಕು  ಆದರೆ ಸ್ವಚ್ಛ ಭಾರತ ಅಭಿಯಾನದಲ್ಲಿ ಸಂಪೂರ್ಣವಾಗಿ ಈ ಇಲಾಖೆಯ ವಸತಿಗೃಹಗಳು ನಿರ್ಲಕ್ಷತನಕ್ಕೆ ಒಳಗಾಗಿರುವುದು ನಿಜಕ್ಕೂ ಶೋಚನೀಯ ವಿಷಯ.
ವಸತಿಗೃಹಗಳದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡುವಂತೆ ನಗರಸಭೆ ಅಧ್ಯಕ್ಷೆ ಮಧುರ ಶಿವಾನಂದ್ ಗೆ  ಒಂದು ಬಾರಿ   ಹಾಗೂ ಸಾಗರದ ಸಿಪಿಐ ಅಶೋಕ್ ಕುಮಾರ್ ಅವರನ್ನು ಕಳೆದ 2 ಬಾರಿ ನಮ್ಮ ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಸ್ವಚ್ಚಗೊಳಿಸುವ ಆಶ್ವಾಸನೆ ನೀಡಿದರೇ ಹೊರತು ಇದುವರೆಗೂ ಆ ಕೆಲಸ ಕಾರ್ಯಗತವಾಗಿಲ್ಲ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸ್ವಚ್ಛ ಭಾರತ ಅಭಿಯಾನದಲ್ಲಿ ಈ ಪೊಲೀಸ್ ವಸತಿಗೃಹಕ್ಕೆ ಜೀವಕಳೆಯನ್ನು ನೀಡಬೇಕೆಂಬುದು ನಮ್ಮ ಸುದ್ದಿಸಂಸ್ಥೆ ಯ ಆಶಯ.




 ವರದಿ : ಪವನ್ ಕುಮಾರ್ ಕಠಾರೆ.





ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..





Leave a Reply

Your email address will not be published. Required fields are marked *