ಸಾಗರ:ತಾಲ್ಲೂಕಿನ ಹಲವು ಕಾಮಗಾರಿಗಳಿಗೆ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಚಾಲನೆ ನೀಡಿದರು.
ಅವರು ಇಲ್ಲಿನ ಗಾಂಧಿಮಂದಿರದ ಹೊರಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಹೋಸ್ಟಿಂಗ್ ಮೂಲಕ ಈ ಕೆಳಗಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯ 155-00 ಕೋಟಿ ರೂಪಾಯಿಗಳು, ಜೋಗ ಅಭಿವೃದ್ಧಿ ಕಾಮಗಾರಿಗಳಿಗೆ 165-00ಕೋಟಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206 (69) ತುಮಕೂರು ಹೊನ್ನಾವರ ರಸ್ತೆಯ ಕಿ.ಮೀ. 278 ರಿಂದ 286.40ರವರೆಗೆ ಸಾಗರ ನಗರ ವ್ಯಾಪ್ತಿಯಲ್ಲಿ 4ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ 77.19ಕೋಟಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರ ವ್ಯಾಪ್ತಿಯ ಹಾವೇರಿ-ಸಾಗರ (ರಾಜ್ಯ ಹೆದ್ದಾರಿ-62) ರಸ್ತೆ, ಸರಪಳಿ 108.95 km ರಿಂದ 109kmವರೆಗಿನ ರಸ್ತೆಯ ಭೂಸ್ವಾದೀನ ಮತ್ತು ಅಗಲೀಕರಣ ಕಾಮಗಾರಿಗೆ 60-00 ಕೋಟಿ ರೂ.
ಸಾಗರ ತಾಲ್ಲೂಕಿನ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಸಮುದಾಯ ಭವನ ಶಂಕುಸ್ಥಾಪನೆ 1.50ಕೋಟಿ ರೂಪಾಯಿಗಳು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರಸಭೆಯ ಗಾಂಧಿಮೈದಾನದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾರ್ವಜನಿಕ ಸಭಾಭವನ ನಿರ್ಮಾಣ ಕಾಮಗಾರಿ 50-00ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಪಟಗುಪ್ಪ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಂಸದ ಬಿ.ವೈ. ರಾಘವೇಂದ್ರ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾದಿಕಾರಿಗಳಾದ ಶಿವಕುಮಾರ್ ಎಲ್ಲರನ್ನು ಸ್ವಾಗತಿಸಿದರು.
ಈ ಸಂಧರ್ಭದಲ್ಲಿ 17 ನಿಮಿಷದ ಶಿವಮೊಗ್ಗ ಅಭಿವೃದ್ಧಿಯ ಕಿರುಚಿತ್ರ ತೋರಿಸಲಾಯಿತು.
ಇದರಲ್ಲಿ ಜೋಗ ಅಭಿವೃದ್ಧಿ 165ಕೋಟಿ, ವಿಮಾನ ನಿಲ್ದಾಣ 384ಕೋಟಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ 850ಕೋಟಿ, ಶಿವಮೊಗ್ಗದಲ್ಲಿ ನಾಲ್ಕು ರೈಲ್ವೆ ಮೇಲ್ಸೇತುವೆ ನಿರ್ಮಾಣ 43.93ಕೋಟಿ, ಸವಳಂಗ, ಕಾಶೀಪುರ, ಭದ್ರಾವತಿಯಲ್ಲಿ ಮೇಲ್ಸೇತುವೆಗೆ 89ಕೋಟಿ, ಸರಕಾರಿ ನೌಕರರ ಭವನಗಳಿಗೆ 6ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಗಳಿಗೆ 156ಕೋಟಿ, ಫ್ರೀಡಂ ಪಾರ್ಕ್ 5.35ಕೋಟಿ, ಬಸವೇಶ್ವರರ ಪುತ್ಥಳಿಗೆ 32ಲಕ್ಷ, ರೈಲ್ವೆ ರಿಂಗ್ ರೋಡ್ ಗೆ 20ಕೋಟಿ, ಮೆಸ್ಕಾಂಗೆ ನೂತನ ಕಟ್ಟಡಗಳು 9ಕೋಟಿ, ಸೂಡಾ ವಸತಿ ಬಡಾವಣೆ, ಸಕ್ರೆಬೈಲಿನಲ್ಲಿ ಆನೆ ಬಿಡಾರ 20ಕೋಟಿ, ಸಿಗಂದೂರು ಸೇತುವೆ 423ಕೋಟಿ, ತೀರ್ಥಹಳ್ಳಿ ರಸ್ತೆಗೆ 55 ಕೋಟಿ ಅನುದಾನ ನೀಡಿರುವ ಬಗ್ಗೆ ಮಾಹಿತಿ ನೀಡಲಾಯಿತು.
ವೇದಿಕೆಯಲ್ಲಿ ಸಾಗರ ಶಾಸಕರು ಹಾಗೂ MSIL ಅಧ್ಯಕ್ಷರಾದ ಹೆಚ್. ಹಾಲಪ್ಪ ಹರತಾಳು, ನಗರಸಭಾ ಅಧ್ಯಕ್ಷೆ ಮಧುರಾ ಶಿವಾನಂದ್,ಉಪಾಧ್ಯಕ್ಷರಾದ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ, ಉ ಮಾಜಿ ನಗರಸಭಾ ಅಧ್ಯಕ್ಷೆ ಎನ್. ಲಲಿತಮ್ಮ, ಎಪಿಎಂಸಿ ಅಧ್ಯಕ್ಷರಾದ ಚೇತನ್’ರಾಜ್ ಕಣ್ಣೂರು, ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರ್, ಆಶ್ರಯ ಸಮಿತಿ ಸದಸ್ಯರಾದ ರಾಮಣ್ಣ, ಎಸ್.ಎಂ.ಭಾಷಾ, ಗೀತಾ ಅಶೋಕ್, ಕಾರ್ಗಲ್-ಜೋಗ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್, ಸದಸ್ಯರಾದ ಟಿ.ಡಿ. ಮೇಘರಾಜ್, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರ ಮಂಡಲ ಅಧ್ಯಕ್ಷ – ಕೌನ್ಸಿಲರ್ ಗಣೇಶ್ ಪ್ರಸಾದ್, ಲಿಂಗರಾಜ್,ತಹಶಿಲ್ದಾರರಾದ ಚಂದ್ರಶೇಖರನಾಯ್ಕ್, ಪೌರಾಯುಕ್ತ ಹೆಚ್.ಕೆ. ನಾಗಪ್ಪ, ಪುರುಷೋತ್ತಮ ಬಿ., ರಾಜೇಂದ್ರ ಪೈ ಹಾರಾಡಿ, ದೀಪಕ್ ಮರೂರಸಾಗರ ಸಂತೋಷ್ ಶೇಟ್, ಶ್ರೀರಾಮ, ಪ್ರೇಮಾ ಕಿರಣ್ ಸಿಂಗ್, ಮೈತ್ರಿ ಪಾಟೀಲ್,ಹಾಗೂ ಎಲ್ಲಾ ನಗರಸಭಾ ಸದಸ್ಯರು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.
ವರದಿ: ಪವನ್ ಕುಮಾರ್ ಕಠಾರೆ
ಪೋ:9632820256
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..