ತೀರ್ಥಹಳ್ಳಿ : ಬರಹಗಾರ್ತಿ ಪದ್ಮಜಾ ಜೋಯ್ಸ್ ರವರ “ಕೃಷ್ಣತರಂಗಿಣಿ” ಕೃತಿ ಲೋಕಾರ್ಪಣೆ :

ತೀರ್ಥಹಳ್ಳಿ: ಲೇಖಕ ವಿಷಯವನ್ನು ಗ್ರಹಿಸಿ ತಪಸ್ಸಿನಂತೆ ಬರವಣಿಗೆ ಮಾಡಿದಾಗ ಮಾತ್ರ ಯಶಸ್ವಿಯಾಗುತ್ತಾನೆ. ಸತ್ವಯುತ, ಶಕ್ತಿಯುತವಾದ ಕೃಷ್ಣ ತರಂಗಿಣಿ ಕೃತಿಯಿಂದ ಸಮಾಜ ಸದೃಢವಾಗಲಿ ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಅರೂರು ಅಭಿಪ್ರಾಯಪಟ್ಟರು. ತೀರ್ಥಹಳ್ಳಿ ಪಟ್ಟಣದ ಲಯನ್ಸ್ ಭವನದಲ್ಲಿ ಬೆಂಗಳೂರಿನ ಸ್ನೇಹ ಬುಕ್ ಹೌಸ್ ಪ್ರಸ್ತುತಪಡಿಸಿ ತೀರ್ಥಹಳ್ಳಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಬರಹಗಾರ್ತಿ ದರಲಗೋಡು ಪದ್ಮಜಾ ಜೋಯ್ಸ್ ರವರ ‘ಕೃಷ್ಣ ತರಂಗಿಣಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಶ್ರೇಷ್ಠ ಪರಂಪರೆ ನೀಡಿದ ದೇಶ ನಮ್ಮದು,ಸಾಹಿತಿಗಳು ದೇಶವನ್ನು…

Read More

ತೀರ್ಥಹಳ್ಳಿ:ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅಬ್ದುಲ್ ಬಷೀರ್ ಸಾಹೇಬ್ ಇನ್ನಿಲ್ಲ

ತೀರ್ಥಹಳ್ಳಿ :  ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಬ್ದುಲ್ ಬಷೀರ್ ಇವರು ಇಂದು  ಧೀರ್ಘಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅಬ್ದುಲ್ ಕರೀಂ ಸಾಹೇಬ್ ಹಾಗು  ಶ್ರೀಮತಿ ಹಾಜರಾಂಬಿ ದಂಪತಿಗಳ ಪುತ್ರರಾಗಿ 1940 ರಲ್ಲಿ ಜನಿಸಿದ ಅಬ್ದುಲ್ ಬಶೀರ್ ರವರು ತಮ್ಮ ಇಪ್ಪತಾರನೆಯ ವಯಸ್ಸಿನಲ್ಲಿ ( 1956) ಡಿ ದರ್ಜೆಯ ನೌಕರರಾಗಿ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ ಇವರು ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಅನುಪಮ ಸೇವೆ ಸಲ್ಲಿಸಿಸಿರುತ್ತಾರೆ. ತಮ್ಮ ಸೇವಾ ಅವದಿಯ…

Read More

ತೀರ್ಥಹಳ್ಳಿ: ನಾಡಿಗಾಗಿ ತ್ಯಾಗ ಮಾಡಿದ ಶರಾವತಿ ಸಂತ್ರಸ್ತರ ರೈತರ ಬದುಕು ರೂಪಿಸಲು ಗೃಹ ಸಚಿವರಿಗೆ ಮನವಿ

ತೀರ್ಥಹಳ್ಳಿ: ತಾಲೂಕಿನಲ್ಲಿ ಪುನರ್ವಸತಿ ಪಡೆದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕುವ ಹಕ್ಕನ್ನು ಪುನಶ್ಚೇತನಗೊಳಿಸಲು ವಾಸದ ಮನೆಗಳಿಗೆ ಹಾಗೂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಿ ನ್ಯಾಯ ಒದಗಿಸಿಕೊಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಹಣಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆನಲ್ಲಿ, ಕರಕುಚ್ಚಿ, ಸಂಕ್ಲಾಪುರ, ಕೊಂಬಿನ ಕೈ ಮತ್ತು ದೆಂಬ್ಲಾಪುರ, ಕೋಣಂದೂರಿನ ಗ್ರಾಮಸ್ಥರು ಮತ್ತು ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ರೈತರು ಸೋಮವಾರ ಮನವಿ ನೀಡಿದರು.  ಕಳೆದ ಸುಮಾರು ಎಪ್ಪತ್ತು ವರ್ಷಗಳಿಂದ ಶರಾವತಿ ವಿದ್ಯುತ್ ಯೋಜನೆ…

Read More

ತೀರ್ಥಹಳ್ಳಿ:: ಸಂಘ ಪರಿವಾರದಿಂದ ಯಶಸ್ವಿ ರಕ್ತದಾನ ಶಿಬಿರ

ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಂಘ ಪರಿವಾರಗಳು ತೀರ್ಥಹಳ್ಳಿ ಇವರು ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತೀರ್ಥಹಳ್ಳಿಯ ರೋಟರಿ ರಕ್ತನಿಧಿಯಲ್ಲಿ ಇಂದು ನಡೆಯಿತು. ಸಂಘ ಪರಿವಾರದ ಸದಸ್ಯರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ  ರೋಟರಿ ರಕ್ತನಿಧಿ ತೀರ್ಥಹಳ್ಳಿಯ ಟೆಕ್ನೀಶಿಯನ್ ಅರುಣ್ ಕೆರೋಡಿ  ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ “ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಸೇವೆ, ಸಂಘದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ದಿನವನ್ನು ಸೇವೆಗೆ ಮುಡಿಪಾಗಿಡುತ್ತಾರೆ ಅದರಲ್ಲಿ ಸ್ವಚ್ಚತಾ…

Read More

ಹೆಣ್ಣು ಮಕ್ಕಳು ಮನೆಯಲ್ಲೆ ಇರಿ ಎನ್ನಲು ಪೊಲೀಸ್ ವ್ಯವಸ್ಥೆ ಬೇಕಾ : ಕಿಮ್ಮನೆ ರತ್ನಾಕರ್:

ತೀರ್ಥಹಳ್ಳಿ : ಆರಗ‌ ಜ್ಞಾನೇಂದ್ರ ರವರ ಹೇಳಿಕೆಯಿಂದ ತೀರ್ಥಹಳ್ಳಿಯ ಘನೆತೆಗೆ ಕುಂದು ಬರುತ್ತಿದೆ. ಅವರು ಪ್ರಭುದ್ಧತೆಯಿಂದ ಹೇಳಿಕೆಗಳನ್ನು ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ‌ ಜ್ಞಾನೇಂದ್ರ ಅವರ ಹೇಳಿಕೆಯಿಂದ ಗೃಹ ಸಚಿವ ಸ್ಥಾನಕ್ಕೆ ಅರ್ಹರಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್​ನವರನ್ನು ಗುರಿಯಾಗಿಟ್ಟುಕೊಂಡು ಹೇಳಿಕೆಗಳನ್ನು ನೀಡಬಾರದು. ರಾಜ್ಯದ 6 ಕೋಟಿ ಜನರನ್ನು ನೋಡಿಕೊಂಡು ಹೇಳಿಕೆಗಳನ್ನು ನೀಡಬೇಕು. ಅಧಿಕಾರದಲ್ಲಿದ್ದಾಗ ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಕಾಂಗ್ರೆಸ್​ನವರು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದು…

Read More

ನಂದಿತಾ ಸಾವಿನ ಪ್ರಕರಣ ಸಿಬಿಐ ಗೆ ವಹಿಸಿ :ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್

ತೀರ್ಥಹಳ್ಳಿ: ನೂತನವಾಗಿ ಗೃಹ ಸಚಿವರಾಗಿ ಆಯ್ಕೆಯಾಗಿರುವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿ ನ್ಯಾಯ ಕೊಡಿಸುವ ಮೂಲಕ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ರವರು ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರದ ಅತಿಮುಖ್ಯ ಮತ್ತು ಎರಡನೇ ಮಹತ್ವದ ಖಾತೆಯನ್ನು ಅಲಂಕರಿಸಿದ್ದೀರಿ, ಅಭಿನಂದನೆಗಳು. ತೀರ್ಥಹಳ್ಳಿಯ ನಾಗರೀಕರಿಗೆ ನಿಮ್ಮ‌ಮೇಲೆ ಅತೀವ ನಿರೀಕ್ಷೆಯಿದೆ . ತಾವು ಪಕ್ಷದಲ್ಲೂ ಅತಿ ಪ್ರಭಾವಿಗಳು,ನೇರವಾಗಿ ದೆಹಲಿಯ ಸಂಪರ್ಕ ಹೊಂದಿರುವ ನಾಯಕರು. ಕಳೆದ ಚುನಾವಣೆಯಲ್ಲಿ ಅಂದಿನ‌ ನಿಮ್ಮ‌ಪಕ್ಷದ…

Read More

ತೀರ್ಥಹಳ್ಳಿ: ಗೃಹಸಚಿವರ ಕಾರು ನಿರ್ಗಮಿಸುತ್ತಿದ್ದಂತೆಯೇ ಪಾದಾಚಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಒಮಿನಿ ಕಾರು:

ತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಹೋಗುತ್ತೀದ್ದಂತೆ ಹಿಂದಿದ್ದ ಓಮ್ನಿ ಕಾರೊಂದು ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಗುಡ್ಡೆಕೊಪ್ಪ ನಿವಾಸದಿಂದ ಕೊಪ್ಪದ ಕಡೆ ಗೃಹ ಸಚಿವರ ಕಾರು ಪಯಣ ಬೆಳೆಸಿತು. ಈ ವೇಳೆ ಡಿಸಿಸಿ ಬ್ಯಾಂಕ್ ಎದುರು ಕಾಯಿ ಮೂಟೆ ಹೊತ್ತಿದ್ದ ವ್ಯಕ್ತಿಯೊಬ್ಬ ಸಚಿವರ ಕಾರು ಪಾಸ್ ಆಗುತ್ತಿದ್ದಂತೆ ರಸ್ತೆಗೆ ಹಾರಿದ್ದಾನೆ. ಈ ವೇಳೆ ಓಮ್ನಿ ಕಾರು ಆತನಿಗೆ ಡಿಕ್ಕಿಯಾಗಿ ನಿಯಂತ್ರಣ…

Read More

ತೀರ್ಥಹಳ್ಳಿ: ತಾಲೂಕು ಪಂಚಾಯತ್ ಅಧಿಕಾರವದಿ ಮುಕ್ತಾಯ,ವಿದಾಯ ಸಭೆ:

ತೀರ್ಥಹಳ್ಳಿ: 5 ವರ್ಷಗಳ ಕಾಲ  ಆಡಳಿತ ನಡೆಸಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಇಂದು ತನ್ನ ಅವಧಿಯನ್ನು ಪೂರೈಸಿದೆ. ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ 13 ಜನ ಸದಸ್ಯರುಗಳ ಅಂತಿಮ ವಿಧಾಯಸಭೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು  ತಾಲ್ಲೂಕು  ಅಧ್ಯಕ್ಷೆ ಶ್ರೀಮತಿ ನವಮಣಿ ರವಿಕುಮಾರವರು ಉಪಾಧ್ಯಕ್ಷೆ ಶ್ರೀಮತಿ ಯಶೋಧ ಮಂಜುನಾಥ .ಸದಸ್ಯರುಗಳಾದ ಸಾಲೆಕೊಪ್ಪ ರಾಮ ಚಂದ್ರ. ಕುಕ್ಕೆ ಪ್ರಶಾಂತ್ ,ಕೆಳಕೆರೆ ದಿವಾಕರ್ .ಶ್ರುತಿ ವೆಂಕಟೇಶ್.   ಲಕ್ಷ್ಮಿ ಉಮೇಶ್,  ಗೀತಾ ಸದಾನಂದ ಶೆಟ್ಟಿ,  ವೀಣಾ ಗಿರೀಷ್,ಸುಮಾ ಉದಯ . ಚಂದವಳ್ಳಿ ಸೋಮಶೇಖರ್. ಬೇಗುವಳ್ಳಿ…

Read More

ಈಡೇರಿದ ತೀರ್ಥಹಳ್ಳಿ ಜನತೆಯ ಬಹುದಿನಗಳ ಕನಸು :ಸಚಿವರಾಗಿ ಆರಗ ಜ್ಞಾನೇಂದ್ರ ಇಂದು ಪ್ರಮಾಣ ವಚನ ಸ್ವೀಕಾರ

  ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರರಿಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ದೊರೆತಿದ್ದು ಇಂದು ಮಧ್ಯಾಹ್ನ 2.15 ಕ್ಕೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವಿಷಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವಾಗ ಜ್ಞಾನೇಂದ್ರ ರವರು ತುಂಬಾ ಭಾವುಕರಾಗಿದ್ದರು.ಸಚಿವ ಸ್ಥಾನಕ್ಕಾಗಿ ಯಾವುದೇ ಲಾಭಿ ಮಾಡದ ಜನನಾಯಕನಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ಸಚಿವರಾಗಿ ಅರಗ ಜ್ಞಾನೇಂದ್ರರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿ 4 ಬಾರಿ…

Read More

ತೀರ್ಥಹಳ್ಳಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಕುಸಿತ:

ತೀರ್ಥಹಳ್ಳಿ: ಶಿವಮೊಗ್ಗದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿಯ ಭಾರತಿಪುರ ಎಂಬಲ್ಲಿ ಅಪಾಯಕಾರಿಯಾಗಿ ಕುಸಿದಿದೆ.  ಈ ಮಾರ್ಗವಾಗಿ ಅತಿಭಾರದ ವಾಹನಗಳು ಓಡಾಡುವುದರಿಂದ ರಸ್ತೆ ಇನ್ನಷ್ಟು ಕುಸಿದು ಜೀವಹಾನಿಯಾಗಬಹುದು ಮತ್ತು ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲೂಬಹುದು.  ರಸ್ತೆಯ ಪಕ್ಕದಲ್ಲಿರುವ ತೋಟಗಳ ಮಾಲಿಕರು ತೋಟಗಳಿಗಾಗಿ ಮಣ್ಣು ತೆಗೆದ ಪರಿಣಾಮವಾಗಿ ರಸ್ತೆ ಕುಸಿತ ಕಂಡಿದೆ ಎಂಬುದು ಸ್ಥಳೀಯರ ಮಾತು. ಹೆಚ್ಚು ಮಳೆಯಾಗುವ ಪ್ರದೇಶಗಳು ಹಾಗು ಮಲೆನಾಡಿನಲ್ಲಿ ರಸ್ತೆಯ ಪಕ್ಕದ ಗುಡ್ಡಗಳು ಮಳೆಗಾಲದಲ್ಲಿ ಕುಸಿಯುವುದು…

Read More