ತೀರ್ಥಹಳ್ಳಿ : ಬರಹಗಾರ್ತಿ ಪದ್ಮಜಾ ಜೋಯ್ಸ್ ರವರ “ಕೃಷ್ಣತರಂಗಿಣಿ” ಕೃತಿ ಲೋಕಾರ್ಪಣೆ :

ತೀರ್ಥಹಳ್ಳಿ: ಲೇಖಕ ವಿಷಯವನ್ನು ಗ್ರಹಿಸಿ ತಪಸ್ಸಿನಂತೆ ಬರವಣಿಗೆ ಮಾಡಿದಾಗ ಮಾತ್ರ ಯಶಸ್ವಿಯಾಗುತ್ತಾನೆ.
ಸತ್ವಯುತ, ಶಕ್ತಿಯುತವಾದ ಕೃಷ್ಣ ತರಂಗಿಣಿ ಕೃತಿಯಿಂದ ಸಮಾಜ ಸದೃಢವಾಗಲಿ ಎಂದು ಅಖಿಲ ಭಾರತ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಅರೂರು ಅಭಿಪ್ರಾಯಪಟ್ಟರು.

ತೀರ್ಥಹಳ್ಳಿ ಪಟ್ಟಣದ ಲಯನ್ಸ್ ಭವನದಲ್ಲಿ
ಬೆಂಗಳೂರಿನ ಸ್ನೇಹ ಬುಕ್ ಹೌಸ್ ಪ್ರಸ್ತುತಪಡಿಸಿ ತೀರ್ಥಹಳ್ಳಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಬರಹಗಾರ್ತಿ ದರಲಗೋಡು ಪದ್ಮಜಾ ಜೋಯ್ಸ್ ರವರ ‘ಕೃಷ್ಣ ತರಂಗಿಣಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಶ್ರೇಷ್ಠ ಪರಂಪರೆ ನೀಡಿದ ದೇಶ ನಮ್ಮದು,ಸಾಹಿತಿಗಳು ದೇಶವನ್ನು ಗಟ್ಟಿಯಾಗಿ ಕಟ್ಟಲು ಕಾರಣಕರ್ತರಾಗುತ್ತಾರೆ. ತಪಸ್ಸಿನೊಂದಿಗೆ ಶಕ್ತಿ, ಆರಾಧನೆ ಮಾಡಿದ ಲೇಖಕಿ ಶ್ರೀ ಕೃಷ್ಣನ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಅವಲೋಕಿಸಿದ್ದಾರೆ.ಕೃಷ್ಟ ತರಂಗಿಣಿ
ಕೃತಿ ಓದುಗರನ್ನು ಆಕರ್ಷಿಸಿ ಧೀರ್ಘಕಾಲ ಸಮಾಜದಲ್ಲಿ ಉಳಿಯುವಂತಹ, ಕೃಷ್ಣನ ಸಂದೇಶ ಸಾರುವ ಕೃತಿಯಾಗಲಿದೆ ಎಂದರು.

     ….. ಬರಹಗಾರ್ತಿ ಪದ್ಮಜಾ ಜೋಯ್ಸ್…..



ಶಿಕ್ಷಣ ತಜ್ಞ ಕೆ.ಎಂ.ಜಯಶೀಲ ಮಾತನಾಡಿ, ಸಾಹಿತಿಗಳಿಗೆ ಸಂವೇದನಾ ಶೀಲತೆ ಅತಿ ಮುಖ್ಯ, ಶ್ರೀಕೃಷ್ಣನ ವ್ಯಕ್ತಿತ್ವದ ಆಯಾಮಗಳನ್ನು ಹಲವು ಸಾಹಿತಿಗಳ, ಕವಿಗಳ ಕೃತಿಗಳು ಕನ್ನಡದಲ್ಲಿ ಮಹತ್ವವನ್ನು ಪಡೆದಿದೆ. ಕೃಷ್ಣನ ಚರಿತ್ರೆ ಸ್ಫೂರ್ತಿ ಕೊಡುವಂತದ್ದು. ಕುವೆಂಪು, ಪುತಿನ, ವಿಸೀ, ಮುನ್ನಿ
ಮುಂತಾದ ಮಹಾನ್ ಲೇಖಕರ ಕೃತಿಗಳಲ್ಲಿ ಕೃಷ್ಣನ ಬದುಕಿನ ಸ್ವಾರಸ್ಯವನ್ನು ನಾವು ಓದಿದ್ದೇವೆ. ಶ್ರೀಕೃಷ್ಟ ಪ್ರೀತಿಯ ಆರಾಧ್ಯ ಧೈವನಾಗಿದ್ದಾನೆ. ಕೃಷ್ಣನದು ಮಹಿಳಾ ಪರವಾದ ಸಂವೇದನಾಶೀಲ ವ್ಯಕ್ತಿತ್ವ ಹೆಣ್ಣಿಗೆ ಅನ್ಯಾಯವಾದಗಲೆಲ್ಲಾ ಮೆಟ್ಟಿನಿಂತು ತನ್ನ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಇಂದಿಗೂ ಗೌರವಯುತ ಸ್ಥಾನ ಪಡೆದ ಮಹಾನ್ ವ್ಯಕ್ತಿ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಸಮಾಜದ ಪರಿವರ್ತನೆ ಮಾಡುವ ಶಕ್ತಿ ಸಾಹಿತ್ಯಕ್ಕಿದೆ.ಯಾವುದೇ ಕೃತಿಗಳಾದರೂ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ ಯಾಗಬೇಕು.ಕೃತಿಗೆ ಕೊಡುವ ಮಹತ್ವ ಕೃತಿಕಾರನಿಗೂ ಸಲ್ಲಬೇಕು ಎಂದರು.

ಲೇಖಕಿ ಪದ್ಮಜಾ ಜೋಯ್ಸ್ ಪುಸ್ತಕದ ರಚನೆಯ ಶ್ರಮದ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ, ತೀರ್ಥಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಿರಿಬೈಲು ಧರ್ಮೇಶ್ ವಹಿಸಿ ಮಾತನಾಡಿದರು.ಶ್ರವಣಬೆಳಗೊಳದ ಲೇಖಕಿ ವಸುಮತಿ ಜೈನ್ ಪ್ರಕಾಶಕರ ಪರವಾಗಿ ಮಾತನಾಡಿದರು. ದರಗೋಡು
ನಾಗೇಂದ್ರ ಜೋಯ್ಸ್ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *