Headlines

ಕೊರೊನಾ ಭೀತಿ: ಆಗುಂಬೆ ಚೆಕ್ ಪೋಸ್ಟ್ ಬಿಗಿಗೊಳಿಸಲು ಮುಖ್ಯಮಂತ್ರಿಗಳಿಂದ ಆದೇಶ:

ತೀರ್ಥಹಳ್ಳಿ: ಕರಾವಳಿ ಭಾಗ ಹಾಗೂ ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಥಹಳ್ಳಿಯಲ್ಲಿ ಕೊರೋನಾ ತಪಾಸಣಾ ಕೇಂದ್ರ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅನುಮತಿ ನೀಡಿದ್ದಾರೆ.  ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಇನ್ನೂ ಕೂಡಾ ಕೋವಿಡ್ ಸಂಪೂರ್ಣ ಹತೋಟಿಗೆ ಬಾರದಾಗಿದೆ ಜತೆಗೆ ಮೂರನೆಯ ಅಲೆ ಪ್ರಾರಂಭವಾಗುವ ಅನುಮಾನಗಳಿದ್ದು ತ್ವರಿತ ತಪಾಸಣೆ ಹಾಗೂ ಚಿಕಿತ್ಸೆಗೆ ಸರಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದರ ಜತೆಗೆ ಆಗುಂಬೆಯಲ್ಲಿ ಚೆಕ್ ಪೋಸ್ಟ್…

Read More

ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಮುಖಂಡರಿಂದ ಒಕ್ಕೊರಲ ಮನವಿ:

ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ‌ ನೀಡುವಂತೆ ತಾಲೂಕಿನ 500ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ಇಂದು ಸಂಸದರಾದ ಬಿ.ವೈ.ರಾಘವೇಂದ್ರರನ್ನುಶಿಕಾರಿಪುರದ ಪ್ರವಾಸಿಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.  ಸತತ 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಆರಗ ಜ್ಞಾನೇಂದ್ರ ರವರು ಓರ್ವ ಹಿರಿಯ ಮುತ್ಸದ್ಧಿ ರಾಜಕಾರಣಿ.ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ತಾಲೂಕಿನಲ್ಲಿ ತಮ್ಮದೇ ಕಾರ್ಯಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವುದರಲ್ಲಿ ಸಿದ್ದ ಹಸ್ತರು.ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ,ಪಕ್ಷ ಬಲವರ್ಧನೆಗೆ…

Read More

ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ:

ತೀರ್ಥಹಳ್ಳಿ : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟ ಸೇರ್ಪಡೆಯಾಗಲು ಬಿಜೆಪಿ ಪಾಳಯದಲ್ಲಿ ಶಾಸಕರ ಕಸರತ್ತು ಗರಿಗೆದರಿದೆ.   ಜಾತಿ ಲಾಬಿ,ಹಿರಿತನ ಹಾಗೂ ಮಠಾಧಿಪತಿಗಳ ಒತ್ತಡ ಹೀಗೆ ಹತ್ತು ಹಲವಾರು ಪ್ರಯತ್ನಗಳಿಂದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಸಚಿವಗಿರಿ ಗಿಟ್ಟಿಸಲು ಸರ್ಕಸ್ ಮಾಡುತ್ತಿದ್ದಾರೆ. ಆದರೆ ತೀರ್ಥಹಳ್ಳಿಯಲ್ಲಿ ಸ್ವಲ್ಪ ತಮ್ಮ ನೆಚ್ಚಿನ ನಾಯಕ ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ತೀರ್ಥಹಳ್ಳಿಗರ ಆರಾಧ್ಯ ದೈವ ಶ್ರೀರಾಮೇಶ್ವರನ ಮೊರೆ ಹೋಗಲಾಗಿದೆ. ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ…

Read More

ಮೇಗರವಳ್ಳಿ: ಲಸಿಕಾಕರಣವೇ ಮುಳುವಾಗುವ ಸಾಧ್ಯತೆ..!!

ಮೇಗರವಳ್ಳಿ: ಇಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ 2 ನೆಯ ಡೋಸ್ ಲಸಿಕಾ ಅಭಿಯಾನ ನಡೆಯಿತು..  ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ನೂರಕ್ಕೂ ಹೆಚ್ಚು ಜನ ಬಂದು ಜಮಾಯಿಸಿದ್ದರು. ಆಸ್ಪತ್ರೆಯ ಮುಂಬಾಗದಲ್ಲಿರುವ ಚಿಕ್ಕ ಸ್ಥಳದಲ್ಲಿ ಸೇರಿದ್ದ ನೂರಾರು ಜನರಿಗೆ ಸಾಮಾಜಿಕ ಅಂತರದ ಪರಿವೇ ಇರಲಿಲ್ಲ. ಕೇವಲ 50 ಲಸಿಕೆಗಳು ಸರಬರಾಜಾಗಿತ್ತು ಆದ್ದರಿಂದ ಸಾಮಾನ್ಯವಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. 9 ಗಂಟೆಗೆ ಹಾಜರಾದ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಬಾಗಿಲು ತೆರೆಯಲು ಹರಸಾಹಸ…

Read More

ತೀರ್ಥಹಳ್ಳಿ:ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೈಲ ಬೆಲೆಯೇರಿಕೆ ವಿರೋಧಿಸಿ ಸೈಕಲ್ ಜಾಥಾ

ತೀರ್ಥಹಳ್ಳಿ :ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ಕಾಂಗ್ರೆಸ್ ವತಿಯಿಂದ  ನಡೆಯುತ್ತಿದ್ದು , ಪೆಟ್ರೋಲ್ ಡೀಸೆಲ್, ಗ್ಯಾಸ್ ಮತ್ತು ಶ್ರೀ  ಸಾಮಾನ್ಯ ಜನರ ಬಳಕೆಯ ವಸ್ತುಗಳಬೆಲೆಯನ್ನು ಯನ್ನು ನಿರಂತರವಾಗಿ  ಕೇಂದ್ರ ಸರಕಾರವು ಬೆಲೆ ಏರಿಕೆ ಇಂದು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೈಕಲ್ ಜಾಥಾ ದಲ್ಲಿ ಪ್ರತಿಭಟನೆ ನಡೆಸಲಾಯಿತು.  ಶಿವ ರಾಜಪುರದ ಗಣಪತಿ ದೇವಸ್ಥಾನದ ಮುಂಭಾಗದಿಂದ ಸ್ವತಃ ಕಿಮ್ಮನೆ ರತ್ನಾಕರ್ ಅವರು ಸೈಕಲ್ ಏರಿ ಪಟ್ಟಣದ ತಾಲ್ಲೂಕು ಕಚೇರಿಯ ವರೆಗೆ…

Read More

ತೀರ್ಥಹಳ್ಳಿಯಲ್ಲಿ ವ್ಯಾಕ್ಸಿನ್ ಪೈಟ್:

ತೀರ್ಥಹಳ್ಳಿ: ಪಟ್ಟಣದಲ್ಲಿ ಕೊರೊನಾ ಲಸಿಕೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಘರ್ಷಣೆಗೆ ತಿರುಗಿದ ಪರಿಣಾಮ ಕಾಂಗ್ರೆಸ್​ನ ಇಬ್ಬರು ಹಾಗೂ ಬಿಜೆಪಿಯ ಮೂವರು ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪ್ಪು ಮಾಡಿದ ಬಳಿಕ ಪರಸ್ಪರ ಆರೋಪಿಸಿಕೊಂಡ ಎರಡೂ ಪಕ್ಷದವರು ಪ್ರತಿಭಟನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಶಾಲೆಯ ಕೊರೊನಾ ಲಸಿಕೆ ಕೇಂದ್ರದಲ್ಲಿ ಘಟನೆ ನಡೆದಿದ್ದು, ಮೊದಲು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್​ ಪ್ರತಿಭಟನೆ ನಡೆಸಿದರೆ ಅವರ ಪ್ರತಿಭಟನೆ ಮುಗಿದ…

Read More

ಆಗುಂಬೆ ಘಾಟಿಯಲ್ಲಿ ಕಾರು ಮತ್ತು ಬಸ್ ಅಪಘಾತ:

ಆಗುಂಬೆ:ಇಂದು ಮಧ್ಯಾಹ್ನ ಆಗುಂಬೆ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಸ್ವಿಫ್ಟ್ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಜಾಗರೂಕತೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ವೃದ್ಧ ಹಾಗೂ ಮಹಿಳೆಯೊಬ್ಬರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.. ಕಾರಿನಲ್ಲಿ ಮೂವರು ಮಕ್ಕಳು ಕೂಡಾ ಪ್ರಯಾಣಿಸುತ್ತಿದ್ದರು ಆದರೆ ಅದೃಷ್ಟವಶಾತ್ ಬಚಾವಾಗಿದ್ದಾರೆ. ಆಗುಂಬೆಯ ಕಡೆಯಿಂದ ಉಡುಪಿಯ ಕಡೆಗೆ  ಚಲಿಸುತ್ತಿದ್ದ ಕಾರು ೪ನೆಯ ತಿರುವಿನ ಹತ್ತಿರ ಉಡುಪಿಯಿಂದ ಭದ್ರಾವತಿಗೆ ಹೊಗುತ್ತಿದ್ದ ಅನ್ನಪೂರ್ಣೇಶ್ವರಿ ಬಸ್ಸಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ….

Read More