w
Headlines
Home » ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ:

ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ:

ತೀರ್ಥಹಳ್ಳಿ : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟ ಸೇರ್ಪಡೆಯಾಗಲು ಬಿಜೆಪಿ ಪಾಳಯದಲ್ಲಿ ಶಾಸಕರ ಕಸರತ್ತು ಗರಿಗೆದರಿದೆ.
 
ಜಾತಿ ಲಾಬಿ,ಹಿರಿತನ ಹಾಗೂ ಮಠಾಧಿಪತಿಗಳ ಒತ್ತಡ ಹೀಗೆ ಹತ್ತು ಹಲವಾರು ಪ್ರಯತ್ನಗಳಿಂದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಸಚಿವಗಿರಿ ಗಿಟ್ಟಿಸಲು ಸರ್ಕಸ್ ಮಾಡುತ್ತಿದ್ದಾರೆ.

ಆದರೆ ತೀರ್ಥಹಳ್ಳಿಯಲ್ಲಿ ಸ್ವಲ್ಪ ತಮ್ಮ ನೆಚ್ಚಿನ ನಾಯಕ ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ತೀರ್ಥಹಳ್ಳಿಗರ ಆರಾಧ್ಯ ದೈವ ಶ್ರೀರಾಮೇಶ್ವರನ ಮೊರೆ ಹೋಗಲಾಗಿದೆ.

ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ ಶಾಸಕ ಆರಗ ಜ್ಞಾನೇಂದ್ರ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದವರು. ಪಕ್ಷಕ್ಕಾಗಿ ದುಡಿದವರು. ಅವರಿಗೆ ಮಂತ್ರಿಗಿರಿ ಸಿಗಲೆಂದು ಪ್ರಾರ್ಥಿಸಿ ತೀರ್ಥಹಳ್ಳಿಯ ಮಾರಿಕಾಂಬಾ ದೇಗುಲದಲ್ಲಿ ಬಿಜೆಪಿ ಪಟ್ಟಣ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

  ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾಗಣಪತಿಗೆ ಫಲ ಪುಷ್ಪ ಅರ್ಪಿಸಲಾಯಿತು. ರಾಮೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ದುರ್ಗಾಪರಮೇಶ್ವರಿಗೆ ಅಷ್ಟೋತ್ತರ ಸೇವೆಯನ್ನು ನಡೆಸಲಾಯಿತು.
ಕೊರೊನಾದಂಥ ಸಂಕಷ್ಟದ ವೇಳೆ ತಾಲೂಕಿನಲ್ಲಿ ಸುತ್ತಾಡಿ ಜನರ ಕಷ್ಟ ಆಲಿಸಿದ್ದಾರೆ. ಮಳೆ ಬಂದರೂ ಮಳೆಯಲ್ಲಿಯೇ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಅರಗ ಅವರಿಗೆ ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು. ತೀರ್ಥಹಳ್ಳಿಯ ಪಟ್ಟಣ ಯುವ ಮೋರ್ಚಾ ಹಮ್ಮಿಕೊಂಡಿದ್ದರು.

 ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಪಕ್ಷದ ವಿವಿಧ ಪದಾಧಿಕಾರಿಗಳು, ತಾಲೂಕು ಯುವ ಮೋರ್ಚಾದ ಎಲ್ಲಾ ಸದಸ್ಯರ ಉಪಸ್ಥಿತರಿದ್ದರು.


ವರದಿ : ದೇವರಾಜ್ ರಿಪ್ಪನ್ ಪೇಟೆ



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.