ಆನಂದಪುರ: ಸಾಗರ ತಾಲ್ಲೂಕಿನಲ್ಲಿ ಕಳೆದ 1 ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಇದರಿಂದ ಐವತ್ತು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಸಾಗರ ತಾಲ್ಲೂಕಿನ ಆನಂದಪುರ ದಲ್ಲಿ ಪ್ರವಾಹ ವೀಕ್ಷಣೆಗೆ ಆಗಮಿಸಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಆನಂದಪುರಂ ಹೋಬಳಿಯಲ್ಲಿ ಜನರು ಕೋಟ್ಯಂತರ ರೂ ನಷ್ಟಕ್ಕೀಡಾಗಿದ್ದಾರೆ ಎಂದರು.
ಮನೆಗಳು ಬಿದ್ದಿವೆ ಕೊಟ್ಟಿಗೆಗಳು ಮುರಿದಿವೆ,ರೈತರ ಬೆಳೆ ಕೂಡ ಹಾಳಾಗಿದೆ ಕೂಡಲೇ ಅಧಿಕಾರಿಗಳು ಹಾಗೂ ಸರಕಾರ ಸಂತ್ರಸ್ತರ ನೆರವಿಗೆ ಬರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ರಾಜೀನಾಮೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿ ಎಸ್ ಯಡಿಯೂರಪ್ಪನವರ ಕುರ್ಚಿಗೆ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಭ್ರಷ್ಟಾಚಾರವೇ ಮುಳುವಾಯಿತೇ ಎಂಬ ಶಂಕೆಗೆ ಇದೀಗ ಬಿಜೆಪಿ ನಾಯಕರೇ ಉತ್ತರವನ್ನು ನೀಡಬೇಕು.ಬಿ ಎಸ್ ಯಡಿಯೂರಪ್ಪನವರು ಮುಂದಿನ 2 ವರ್ಷ ಸಿಎಂ ಆಗಿದ್ದರೆ ಜಿಲ್ಲೆಗೆ ಹಲವು ಲಾಭಗಳು ಇದ್ದವು ಯಾಕೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಾರೆ ತಿಳಿಯದು ಎಂದರು.
ಒಟ್ಟಾರೆ ಪ್ರವಾಹದ ಪೀಡಿತ ಪ್ರದೇಶಕ್ಕೆ ಮಾಜಿ ಶಾಸಕರ ಭೇಟಿ ಸಂಕಷ್ಟಕ್ಕೀಡಾದವರಿಗೆ ಸ್ವಲ್ಪ ಧೈರ್ಯವನ್ನು ತುಂಬುವಂತಿತ್ತು.
ವರದಿ: ಪವನ್ ಕುಮಾರ್ ಕಠಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..