ಶಿವಮೊಗ್ಗ : ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಗುರುವಾರ ರಚನೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಸಚಿವ ಸ್ಥಾನ ಯಾರಿಗೆ ? ಎಂಬ ತೀವ್ರ ಚರ್ಚೆ ಸಾರ್ವಜನಿಕ ವಲಯದಲ್ಲಿ ಪ್ರಾರಂಭಗೊಂಡಿದೆ. ಆಯಾ ಭಾಗದ ಶಾಸಕರ ಬೆಂಬಲಿಗರು ತಮ್ಮ ಶಾಸಕರೇ ಮಂತ್ರಿಯಾಗುತ್ತಾರೆ ಎಂದು ಪ್ರಬಲ ವಾದ ಮಂಡಿಸುತ್ತಿರುವು ಕೇಳಿ ಬರುತ್ತಿದೆ.
ಈ ಮೊದಲು ರಾಜ್ಯದಲ್ಲಿ ಯಡಿಯೂರಪ್ಪ ಸರಕಾರವಿದ್ದಾಗ ಪಕ್ಷದ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಜಿಲ್ಲಾ ಉಸ್ತುವಾರಿ ಮತ್ತು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಹಿರಿತನ ಮತ್ತು ಸಚಿವರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯೂ ಈಶ್ವರಪ್ಪ ಅವರಿಗೆ ಉಸ್ತುವಾರಿ ಸಚಿವ ಸ್ಥಾನ ಲಭ್ಯವಾಗಲಿದೆ ಎಂಬ ಆಶಯ ಅವರ ಬೆಂಬಲಿಗರದ್ದಾಗಿದೆ.
ಆದರೆ ಸಾಗರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ತೀರಾ ಹತ್ತಿರವಾಗಿರುವ ಹರತಾಳು ಹಾಲಪ್ಪ ನವರ ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ.ಈ ಹಿಂದೆ ಯಡಿಯೂರಪ್ಪರವ ಸರ್ಕಾರದಲ್ಲಿ ನಾಗರೀಕ ಮತ್ತು ಆಹಾರ ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿದ್ಯ ದೊರೆತು ಶಿವಮೊಗ್ಗ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಾರೆ ಎಂದು ಹರತಾಳು ಹಾಲಪ್ಪರವರ ಬೆಂಬಲಿಗರು ಪ್ರಬಲ ವಾದ ಮಂಡಿಸುತ್ತಿದ್ದಾರೆ.
ತೀರ್ಥಹಳ್ಳಿ ಶಾಸಕರಾಗಿ ನಾಲ್ಕು ಬಾರಿ ಆಯ್ಕೆಯಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದ ಆರಗ ಜ್ಞಾನೇಂದ್ರ ರವರ ಹೆಸರನ್ನು ಶಿವಮೊಗ್ಗ ಜಿಲ್ಲೆಯ ಆರ್ ಎಸ್ ಎಸ್ ನ ಪ್ರಮುಖರು ಸೂಚಿಸಿರುವುದರಿಂದ ಅವರ ಆಯ್ಕೆ ಖಚಿತವಾಗಿದೆ ಹಾಗೇಯೆ ಜಿಲ್ಲೆಯ ಉಸ್ತುವಾರಿಯನ್ನು ಅವರಿಗೆ ವಹಿಸಲಾಗುತ್ತದೆ ಎಂಬುವುದು ಆರಗ ಜ್ಞಾನೇಂದ್ರ ಅಭಿಮಾನಿಗಳ ಅಂಬೋಣ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರ ಹಾಗೂ ಹಿಂದೆ ಎಸ್ ಎಂ ಕೃಷ್ಣ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದಂತಹ ಕುಮಾರ್ ಬಂಗಾರಪ್ಪ ರವರ ಹೆಸರು ಕೂಡಾ ಅಲ್ಲಗೆಳೆಯುವಂತಿಲ್ಲ.ಈಡಿಗ ಸಮುದಾಯದ ಜಿಲ್ಲೆಯ ಪ್ರಮುಖ ನಾಯಕ ಕುಮಾರ್ ಬಂಗಾರಪ್ಪರವರ ಪರವಾಗಿ ಎಸ್ ಎಂ ಕೃಷ್ಣ ಈಗಾಗಲೇ ಬ್ಯಾಟಿಂಗ್ ಪ್ರಾರಂಬಿಸಿದ್ದಾರೆ ಸಚಿವ ಸ್ಥಾನ ಹಾಗೂ ಶಿವಮೊಗ್ಗ ಉಸ್ತುವಾರಿ ಅವರಿಗೆ ದೊರೆಯುತ್ತದೆ ಎಂಬುವುದು ಕುಮಾರ್ ಬಂಗಾರಪ್ಪ ಅಭಿಮಾನಿಗಳ ಪ್ರಬಲ ವಾದ.
ಒಟ್ಟಾರೆಯಾಗಿ ಯಡಿಯೂರಪ್ಪ ರವರ ಸ್ವಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಕೀಲಿ ಕೈ ಯಾರ ಕೈಗೆ ಸಿಗುವುದು ಎಂದು ಕಾದು ನೋಡಬೇಕಾಗಿದೆ.
ವರದಿ : ® ®
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..