ಜಿಲ್ಲಾ ಸುದ್ದಿ:
ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ
ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ ರಿಪ್ಪನ್‌ಪೇಟೆ : ಪಟ್ಟಣದ ವಿದ್ಯಾರ್ಥಿನಿ ಹರ್ಷಿತ.ಎ. ಗಣಿತ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಹರ್ಷೀತ.ಎ.ಸಲ್ಲಿಸಿದ ಗಣಿತ ಶಾಸ್ತ್ರದಲ್ಲಿನ `ಎ ಸ್ಟಡಿ ಆನ್ ಡಾಮಿನೇಷನ್. ಸ್ಟ್ರೈಕಾಮ್ ಹ್ಯಾಮಿಂಗ್ ಅಂಡ್ ಟೋಪಾಲಾಜಿಕಲ್ ಇಂಡಿಸಸ್’ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಣಿಪಾಲ್ ಆಕಾಡೆಮಿ ಆಫ್ ಹೈಯರ್ಎಜುಕೇಷನ್ ಪಿಹೆಚ್‌ಡಿ ಪದವಿ ನೀಡಿದೆ. ಮಣಿಪಾಲ್ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಪ್ರಾಧ್ಯಾಪಕಿ ಡಾ.ಸಬಿತಾರವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊಂಡಿದ್ದರು. ಪಟ್ಟಣದ ಸಾಗರ ರಸ್ತೆಯ ನಿವಾಸಿ ಮತ್ತು ಸಾಗರದ ಸರ್ಕಾರಿ…
ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ
ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಆನಂದಪುರ ಠಾಣೆಗೆ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ.!? ಈ ಸುದ್ದಿ ನೋಡಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ. ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರನ್ನು ಅನಂದಪುರ ಪೊಲೀಸ್…
RIPPONPETE | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ
RIPPONPETE | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು. ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು. ರಿಪ್ಪನ್ ಪೇಟೆಯಲ್ಲಿ…
ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್
ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಪಿಎಸ್‌ಐ ಪ್ರವೀಣ್ ಎಸ್ ಪಿ ಖಡಕ್ ವಾರ್ನಿಂಗ್ ರಿಪ್ಪನ್‌ಪೇಟೆ : ಕಾನೂನು ಎಲ್ಲರಿಗೂ ಒಂದೇ ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುವುದೆಂದು ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪದೇಪದೆ ಅಪರಾಧ ಎಸಗುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಗೆ…
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ 15 ಅಂಶ ಅನುಷ್ಠಾನ ಸಮಿತಿಗೆ ಅಮೀರ್ ಹಂಜಾ ನೇಮಕ
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ 15 ಅಂಶ ಅನುಷ್ಠಾನ ಸಮಿತಿಗೆ ಅಮೀರ್ ಹಂಜಾ ನೇಮಕ ರಿಪ್ಪನ್ ಪೇಟೆ : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಹಂಜಾ ರವರನ್ನು ನಾಮನಿರ್ದೇಶನಗೊಳಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಆದೇಶಿಸಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಮೀರ್ ಹಂಜಾರವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪ್ರಧಾನಮಂತ್ರಿಗಳ 15 ಅಂಶ ಅನುಷ್ಠಾನ ಸಮಿತಿಗೆ ಜಿಲ್ಲಾ…
ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ
ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ; ತಾಲೂಕಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಇಂತಹ ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿಯೂ ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿರುವುದು ವಿಪರ‍್ಯಾಸ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಕಾರ‍್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ,ಹೊಸನಗರಕ್ಕೆ…
ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ – ಕೆ ಟಿ ಈಶ್ವರ್
ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ “ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ” – ಕೆ ಟಿ ಈಶ್ವರ್ ರಿಪ್ಪನ್ ಪೇಟೆ :ಪ್ರಕೃತಿಯ ಕೊಡುಗೆಗಳನ್ನು ಎಣಿಸಲು ಸಾಧ್ಯವಿಲ್ಲ. ಮರಗಳು ಉಸಿರಾಟಕ್ಕೆ ಆಮ್ಲಜನಕ ನೀಡುತ್ತವೆ, ನದಿಗಳು ನಮಗೆ ನೀರು ನೀಡುತ್ತವೆ, ಮಣ್ಣು ಆಹಾರ ಬೆಳೆಸುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ನಾವು ಈ ಸಂಪತ್ತುಗಳನ್ನು ದುರ್ಬಳಕೆ ಮಾಡುತ್ತಿದ್ದೇವೆ. ಎಂದು ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕ ಕೆ. ಟಿ.ಈಶ್ವರ್ ಹೇಳಿದರು. ಪಟ್ಟಣದ…
ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನ – 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದರಿಂದ ಶಿಲನ್ಯಾಸ
ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನ – 108 ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಸದರಿಂದ ಶಿಲನ್ಯಾಸ ದೇವಸ್ಥಾನದ ಅಭಿವೃದ್ದಿಗೆ ಮಾತೃಶ್ರೀ ಹೆಸರಿನಲ್ಲಿ ವೈಯಕ್ತಿಕ 10 ಲಕ್ಷ ದೇಣಿಗೆ ನೀಡಿದ ಬಿವೈಆರ್ ರಿಪ್ಪನ್ ಪೇಟೆ : ಇತಿಹಾಸ ಪ್ರಸಿದ್ದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ 108 ಮೆಟ್ಟಿಲು ನಿರ್ಮಾಣಕ್ಕೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ದೇಣಿಗೆ ನೀಡುವ ಮೂಲಕ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಿಯ ದರ್ಶನಕ್ಕೆ ಭಕ್ತರು ಮೆಟ್ಟಿಲ ಮೇಲೆ ನಡೆದು ಬರುವಾಗ ಸಂಸದರ ಹೆಸರು ನೆನಪು ಮಾಡಿಕೊಳ್ಳುತ್ತಾ ನಮಗೆ…
ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ
ತಳಲೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ ವಿ ಗಣಪತಿ ರವರಿಗೆ ಆತ್ಮೀಯ ಬೀಳ್ಕೊಡುಗೆ ರಿಪ್ಪನ್ ಪೇಟೆ : : ಗುರುಗಳು ವಿದ್ಯಾರ್ಥಿಗಳಿಗೆ ಅಕ್ಕರೆ ತೋರಿದರೆ ಸಕ್ಕರೆಯ ಜೀವನ ಅವರದಾಗುತ್ತದೆ. ಇದರಿಂದ ಗುರು, ಶಿಷ್ಯರ ಸಂಬಂಧ ಪರಿ ಶುದ್ಧವಾಗಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಭವಿಷ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಹೇಳಿದರು. ತಳಲೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ…
ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡುಕೋಣ ಸಾವು
ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡುಕೋಣ ಸಾವು ತೀರ್ಥಹಳ್ಳಿ: ರಾಮಕೃಷ್ಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಪಾಲ್ ಮಜರೆ ಗ್ರಾಮದಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ 15 ವರ್ಷದ ಗಂಡು ಕಾಡುಕೋಣ ಮೃತಪಟ್ಟಿದೆ. ತೀರ್ಥಹಳ್ಳಿ- ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನವೊಂದು ರಸ್ತೆ ದಾಟುತ್ತಿದ್ದ ಕಾಡುಕೋಣಕ್ಕೆ ಡಿಕ್ಕಿ ಹೊಡೆದಿತ್ತು. ತಲೆ, ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಪ್ರತ್ಯಕ್ಷದರ್ಶಿ ಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡುಕೋಣಕ್ಕೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಮೇಗರವಳ್ಳಿ ವಲಯಾರಣ್ಯಾಧಿಕಾರಿ ಕಚೇರಿಗೆ ಸ್ಥಳಾಂತರಿಸಿದ್ದರು….