ಆರ್ಧಕ್ಕೆ ನಿಂತ ರಸ್ತೆ ಅಗಲೀಕರಣ ಕಾಮಗಾರಿ ನಾಗರೀಕರಿಗೆ ಕಿರಿಕಿರಿ
ರಿಪ್ಪನ್‌ಪೇಟೆ;-ಸಾಗರ-ತೀರ್ಥಹಳ್ಳಿ ಮಾರ್ಗದ ತಲಾ ಒಂದು ಕಿ.ಮೀ. ರಸ್ತೆ ಆಗಲೀಕರಣ ಕಾಮಗಾರಿ ಅರಂಭವಾಗಿ ವರ್ಷಗಳಾಗುತ್ತಾ ಬಂದರೂ ಕೂಡಾ ಕಾಮಗಾರಿ ಆರ್ಧಕ್ಕೆ ನಿಂತು ಸಾರ್ವಜನಿಕರಿಗೆ ಕಿರಿಕಿರಿಯಂತಾಗಿದೆ.
ಕಳೆದ 2022 ನವಂಬರ್ ಡಿಸಂಬರ್ ತಿಂಗಳಲ್ಲಿ ರಸ್ತೆ ಸಾಗರ ಎಪಿಎಂಸಿ ಯಾರ್ಡ್ ಬಳಿಯಿಂದ ಸುಮಾರು 1 ಕಿ.ಮೀ. ದೂರದ ರಸ್ತೆ ಆಗಲೀಕರಣ ಮತ್ತು ಬಾಕ್ಸ್ ಚರಂಡಿ ವಿದ್ಯುತ್ತ ಕಂಬ ಸ್ಥಳಾಂತರ ಹೀಗೆ ಆಭಿವೃದ್ದಿ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷಗಳಾಗುತ್ತಾ ಬಂದರೂ ಕಾಮಗಾರಿ ಆರ್ಧಂಬರ್ಧವಾಗಿಯೇ ಕುಂಟುತ್ತಾ ಸಾಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ತಂದೊಡ್ಡಿದೆ.
ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದ್ದು ಸಾರ್ವಜನಿಕರಿಗಾಗಿ ಸರಬರಾಜು ಮಾಡಲಾಗಿರುವ ಕುಡಿಯುವ ನೀರಿನ ಪೈಪ್‌ಲೈನ್ ಪೈಪ್‌ಗಳು ಒಡೆದು ಕುಡಿಯುವ ನೀರು ಸರಬರಾಜು ಅಗದೇ ಎಲ್ಲಾ ಭೂಮಿ ಪಾಲು ಆಗುವಂತಾಗಿದೆ. ಗ್ರಾಮಾಡಳಿತದವರು ಬರಿ ಪೈಪ್‌ಲೈನ್ ಕಾಮಗಾರಿ ದುರಸ್ಥಿಗಾಗಿ ಲಕ್ಷಾಂತರ ರೂಪಾಯಿ ಹಣ ವಿನಿಯೋಗವಾಗುವಂತಾಗಿದ್ದರೂ ಕೂಡಾ ಒಡೆದ ಹಳೆಯ ಸರಬರಾಜು ಪೈಪ್ ಲೈನ್ ದುರಸ್ಥಿಯಾಗದೆ ಸಾಗರ ರಸ್ತೆಯ ನಿವಾಸಿಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಾಗರ ರಸ್ತೆಯ ಗಣೇಶ ಮೆಟಲ್ ಸ್ಟೋರ್ ಅಂಗಡಿ ಮುಂಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗವನ್ನು ಬಿಡದೆ ಇರುವುದು ಕಾಮಗಾರಿ ವಿಳಂಬಕ್ಕೆ ಕಾರಣವೆಂದು ಲೋಕೋಪಯೋಗಿ ಇಲಖೆ ಮತ್ತು ಗ್ರಾಮಾಡಳಿತ ತೆರವು ಕಾರ್ಯಾಚರಣೆಗಾಗಿ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಈ ಜಾಗದ ಮೇಲೆ ನ್ಯಾಯಾಲಯದ ತಡೆ ಅದೇಶವಿದೆ ಎಂದು ಹೇಳಿ ಸಾಗಹಾಕುತ್ತಿದ್ದು ಅಭಿವೃದ್ದಿ ಕಾರ್ಯಕ್ಕೆ ಅಡೆ ತಡೆ ಉಂಟು ಮಾಡುತ್ತಿದ್ದು ಅಲ್ಲದೆ ರಸ್ತೆಯ ಮೇಲೆಯೇ 11 ಕೆ.ವಿ.ಹೆವಿ ಲೈನ್ ವಿದ್ಯುತ್ ಕಂಬ ಇದ್ದು ಕಂಬ ಸ್ಥಳಾಂತರ ಮಾಡಲು ಈ ಅಂಗಡಿ ಮಾಲೀಕ ನಿರ್ಲಕ್ಷö್ಯ ದೋರಣೆ ತಾಳಿರುವುದೇ ಇಲ್ಲಿನ ರಸ್ತೆ ಅಗಲೀಕರಣದ ಕಾಮಗಾರಿಗೆ ನೂರೆಂಟು ವಿಘ್ನಗಳಾಗಲು ಕಾರಣವಾಗಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಶಾಲೆ ಕಾಲೇಜ್ ಮತ್ತು ಮಳೆಗಾಲ ಅರಂಭವಾಗಿದ್ದು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಶಾಲಾ ಮಕ್ಕಳು ರಸ್ತೆಯ ಅಂಚಿನಲ್ಲಿ ನಡೆದು ಕೊಂಡು ಹೋಗಿ ಬರುವುದೇ ಕಷ್ಟಕರವಾಗಿದೆ ಅಗಲೀಕರಣ ಕಾಮಗಾರಿಗಾಗಿ ತೆಗೆಯಲಾದ ಹೊಂಡ ಗುಂಡಿ ಮತ್ತು ರಸ್ತೆಯ ಮೇಲೆ ಹಾಕಲಾದ ಮಣ್ಣಿನಿಂದಾಗಿ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿ ವಿದ್ಯಾರ್ಥಿಗಳು ಹಾಕಿಕೊಂಡ ಬಂದಂತಹ ಶಾಲಾ ಸಮವಸ್ತ್ರ ಗಳ ಮೇಲೆ ಕೆಸರು ಸಿಡಿದು ಹಿಡಿಶಾಪ ಹಾಕುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳು ಮತ್ತು ಸ್ಥಳೀಯ ಗ್ರಾಮಾಡಳಿತ ಇತ್ತ ಗಮನಹರಿಸಿ ತುರ್ತು ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರಿಗಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವತ್ತ ಮುಂದಾಗುವರೆ ಕಾದು ನೋಡಬೇಕಾಗಿದೆ.