Headlines

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಡೆಂಗ್ಯೂ ತೀವ್ರ ಹೆಚ್ಚಳ – ಪಟ್ಟಣದ ಮನೆ ಮನೆಗೂ ಇಂದು ಫಾಗಿಂಗ್ ಕಾರ್ಯಾಚರಣೆ | Ripponpete

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಡೆಂಗ್ಯೂ ತೀವ್ರ ಹೆಚ್ಚಳ – ಪಟ್ಟಣದ ಮನೆ ಮನೆಗೂ ಇಂದು ಫಾಗಿಂಗ್ ಕಾರ್ಯಾಚರಣೆ | Ripponpete

ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಖಾಯಿಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯಿಂದ ಪಟ್ಟಣ ವ್ಯಾಪ್ತಿಯ ಎಲ್ಲ ಮನೆಗಳಿಗೆ ಫಾಗಿಂಗ್‌ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

ಭಾನುವಾರ ಸಂಜೆ 04 ರಿಂದ 07 ಗಂಟೆಯವರೆಗೆ ಪಟ್ಟಣದ ಎಲ್ಲ ಮನೆಗಳಿಗೂ ಫಾಗಿಂಗ್ ನಡೆಸಲಾಗುವುದು ಈ ಸಂಧರ್ಭದಲ್ಲಿ ಮನೆಯಲ್ಲಿರುವ ಎಲ್ಲಾ ಸದಸ್ಯರು ಮನೆಯಿಂದ ಹೊರಗಡೆ ಇದ್ದು ಸಹಕರಿಸಲು ಗ್ರಾಪಂ ಪಿಡಿಓ ಮಧುಸೂಧನ್ ಮನವಿ ಮಾಡಿದ್ದಾರೆ.

ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಹಾಗೂ ಹೊರ ವಲಯದಲ್ಲಿ ರೋಗಗಳ ಹರಡುವಿಕೆಗೆ ಕಾರಣವಾದ ಸೊಳ್ಳೆ ಸಂತತಿಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಗ್ರಾಮಾಡಳಿತ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಫಾಗಿಂಗ್‌ ಕಾರ್ಯಾಚರಣೆ ಆರಂಭಿಸಿದೆ.

ಫಾಗಿಂಗ್‌ ಮೂಲಕ ಒಂದು ಹಂತದವರೆಗೆ ಡೆಂಗ್ಯೂ, ಮಲೇರಿಯಾ ಬಾಧಿಸಿದ ರೋಗಿಗಳಿಗೆ ಕಚ್ಚಿದ ಸೊಳ್ಳೆಗಳನ್ನು ನಾಶಪಡಿಸಲು ಸಾಧ್ಯವಾಗುವುದು.

Leave a Reply

Your email address will not be published. Required fields are marked *