Ripponpete | ಅಸಮರ್ಪಕ ನಿರ್ವಹಣೆಗೆ ಸ್ಥಗಿತಗೊಂಡಿದ್ದ 108 ಸೇವೆ – ಶಾಸಕರ ವಿಶೇಷ ಆಸಕ್ತಿಯಿಂದ 108 ಆಂಬುಲೆನ್ಸ್ ಸೇವೆ ಪುನರಾರಂಭ
ರಿಪ್ಪನ್‌ಪೇಟೆ : ಜನಸಾಮಾನ್ಯರಿಗೆ ತುರ್ತುಚಿಕಿತ್ಸೆಗಾಗಿ ಆಪತ್ಕಾಲದಲ್ಲಿ ನೆರವಾಗಬೇಕಿದ್ದ 108 ಆಂಬುಲೆನ್ಸ್ ತುರ್ತು ಚಿಕಿತ್ಸಾ ವಾಹನ ಸೇವೆ ಪಟ್ಟಣದಲ್ಲಿ ಅಸಮರ್ಪಕ ನಿರ್ವಹಣೆಯಿಂದ ಸ್ಥಗಿತಗೊಂಡು ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಪ್ರಸಾರ ಮಾಡಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಗಮನ ಸೆಳೆಯಲಾಗಿತ್ತು. ಕೂಡಲೇ ಸ್ಪಂದಿಸಿದ ಶಾಸಕರು ಜಿಲ್ಲಾ ಆರೋಗ್ಯ ಅಧಿಕಾರಿ ನಟರಾಜ್ ಕೆ ಎನ್ ರವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಪರ್ಯಾಯ ವಾಹನ ಕಲ್ಪಿಸುವಂತೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಹೊಳಲೂರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತಿದ್ದ 108 ಆಂಬುಲೆನ್ಸ್ ನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು ಇನ್ನು ಮುಂದೆ ಪಟ್ಟಣದ ವ್ಯಾಪ್ತಿಯಲ್ಲಿ 108 ಸೇವೆ 24×7 ಲಭ್ಯವಿರುತ್ತದೆ.
ಒಟ್ಟಾರೆಯಾಗಿ ಜನಸಾಮಾನ್ಯರಿಗೆ ತುರ್ತು ಸಂಧರ್ಭದಲ್ಲಿ ಅಗತ್ಯವಿರುವ ಆಂಬುಲೆನ್ಸ್ ಸ್ಥಗಿತಗೊಂಡಿದ್ದರಿಂದ ಹೊಸನಗರ ಹಾಗೂ ನಗರ ಭಾಗಗಳಿಂದ ಬರುವವರೆಗೂ ಕಾಯಬೇಕಾಗಿತ್ತು. ಈ ವಿಚಾರಕ್ಕೆ ಕೂಡಲೇ ಸ್ಪಂದಿಸಿ ಪರ್ಯಾಯ 108 ವಾಹನವನ್ನು ಕಲ್ಪಿಸಿಕೊಟ್ಟಿರುವ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ವತಿಯಿಂದ ಅಭಿನಂದನೆಗಳು.