Ripponpete | ಸಾಗರ ರಸ್ತೆಯಲ್ಲಿ ಉರಿಯದ ಬೀದಿ ದೀಪ, ಎರಡು ತಿಂಗಳಾದರೂ ಹರಿಯದ ನೀರು, ಸಂಕಷ್ಟದಲ್ಲಿ ನಾಗರೀಕರು

Ripponpete | ಸಾಗರ ರಸ್ತೆಯಲ್ಲಿ ಉರಿಯದ ಬೀದಿ ದೀಪ, ಎರಡು ತಿಂಗಳಾದರೂ ಹರಿಯದ ನೀರು, ಸಂಕಷ್ಟದಲ್ಲಿ ನಾಗರೀಕರು

ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಕಳೆದ ನಾಲ್ಕು ಐದು ತಿಂಗಳಿಂದ ಕುಡಿಯುವ ನೀರಿನ ಪೈಪ್‌ಲೈನ್ ಹಾಳಾಗಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಇನ್ನು ಇದರೊಂದಿಗೆ  ವಿದ್ಯುತ್ ಕಂಬಗಳ ಸ್ಥಳಾಂತರವಾದರೂ ಕೂಡಾ ಕಂಬಕ್ಕೆ ಬೀದಿ ದೀಪ ಅಳವಡಿಸದೇ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ ಎಂದು ಸಾಗರ ರಸ್ತೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಮಾರ್ಗದ  ಎಪಿಎಂಸಿ ಯಿಂದ ವಿನಾಯಕ ವೃತ್ತದ ಮೂಲಕ  ತೀರ್ಥಹಳ್ಳಿ ರಸ್ತೆಯ ಗಾಂಧಿನಗರ ವರೆಗೆ ತಲಾ ಒಂದೊಂದು ಕಿ.ಮೀ ರಸ್ತೆ ಆಗಲೀಕರಣ ಕಾಮಗಾರಿಗೆ 4.85 ಕೋಟಿ ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಿದ್ದು ಈ ಕಾಮಗಾರಿ ಇನ್ನೂ ಅಮೆಗತಿಯಲ್ಲಿ ಸಾಗುತ್ತಿದ್ದ ಮಳೆಗಾರ ಆರಂಭವಾಗಿ ಇನ್ನೂ  ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿ ಸಾರ್ವಜನಿಕರು ವಿದ್ಯಾರ್ಥಿಗಳು ಅಗಲೀಕರಣಕ್ಕಾಗಿ ತಗೆಯಲಾಗಿರುವ  ಡಾಂಬರೀಕರಣ ರಸ್ತೆ  ಈಗ ಕೆಸರು  ಗದ್ದೆಯಂತಾಗಿ ವಿನಾಯಕ ವೃತ್ತಕ್ಕೆ  ಸಮೀಪದಲ್ಲಿಯ  ಸಾರ್ವಜನಿಕ ಸಂಪರ್ಕದ  ನೀರು ಸರಬರಾಜು ಪೈಪ್‌ಲೈನ್  ರಸ್ತೆ ಕಾಮಗಾರಿ ಹಂತದಲ್ಲಿ ಒಡೆದು ನೀರು ಭೂಮಿಯ ಪಾಲಾಗುವಂತಾಗಿದೆ. ಸಾಕಷ್ಟು ಭಾರಿ ಈ ನಾಧುರಸ್ತ ಪೈಪ್ ಲೈನ್ ದುರಸ್ಥಿ ಮಾಡಲಾಗುತ್ತಿದ್ದರು ಪ್ಯಾಚ್ ನಿಲ್ಲದೆ ಪದೇ ಪದೇ ಒಡೆದು ಹೋಗುತ್ತಿದೆ ರಿಪೇರಿ ಮಾಡುವುದೇ ದೊಡ್ಡ ತಲೆನೋವು ಎಂದು ಹೇಳುತ್ತಿದ್ದಾರೆ.

ಸಾಗರ ರಸ್ತೆಯಲ್ಲಿ ಸಂಜೆ ಮತ್ತು ಮುಂಜಾನೆಯಲ್ಲಿ ಕಾಲೇಜ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಹಲವರು ವಾಯ ವಿಹಾರಕ್ಕಾಗಿ ಮಹಿಳೆಯರು ಮತ್ತು ಪುರುಷರು ವಯೋವೃದ್ದರು ಹೀಗೆ  ಬೆಳಗ್ಗೆ  ಷಟಲ್ ಕಾಕ್ ಬ್ಯಾಟ್ ಮಿಂಟನ್ ಮತ್ತು ಕ್ರಿಕೇಟ್ ಆಟವಾಡಲು ಮಕ್ಕಳು ಬಂದು ಹೋಗುತ್ತಾರೆ,ಅದರೆ ಬೀದಿ ದೀಪಾವಿಲ್ಲದೆ ಸಾರ್ವಜನಿಕರು ಓಡಾಡುವುದೇ ಕಷ್ಟಕರವಾಗಿದೆ.ಇದರೊಂದಿಗೆ ಎಪಿಎಂಸಿ ಸಂತೆ ಮಾರ್ಕೆಟ್‌ನಲ್ಲಿ ಸಹ ಬೀದಿ ದೀಪಗಳಿಲ್ಲದೆ ಬಿಡಾಡಿ ಜಾನುವರುಗಳ ಕಳವು ಮಾಡಿಕೊಂಡು ಪರಾರಿಯಾಗಲು ಕಳ್ಳ ಕಾಕರಿಗೆ ರಹದಾರಿಯಾದಂತಾಗಿದೆ.ಕತ್ತಲೆಯಲ್ಲಿ ಯಾರು ಏನು ಮಾಡುತ್ತಿದ್ದಾರೆಂಬುದೇ ತಿಳಿಯದಂತಾಗಿದೆ.

ಸೋಮವಾರ ಸಂತೆಯ ದಿನ ರಾತ್ರಿ ಇಲ್ಲಿ ಬೀದಿ ದೀಪಗಳಿಲ್ಲದೆ ಬೆಳಕಿನಲ್ಲಿಯೇ ಸಂತೆ ವಹಿವಾಟು ಮಾಡಬೇಕಾಗಿದೆ ಇತ್ತ ಗ್ರಾಮಾಡಳತ ಕರವಸೂಲಿ ಮಾತ್ರ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರು ಕೂಡಾ ವಸೂಲಾತಿಯನ್ನು ಕಡ್ಡಾಯವಾಗಿ ಮಾಡುತ್ತಾರೆ.ಹಾಗಾದರೆ ಯಾರು ಈ ಎಲ್ಲ ಮೂಳಭೂತ ಸೌಲಭ್ಯವನ್ನು ಒದಗಿಸುವವರು ಎಂಬ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸುವಂತಾಗಿದೆ.

ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಎಂಬುದಂತು ಮೇರಿಚಿಕೆಯಾಗಿದೆ ಎಲ್ಲೆಂದರಲ್ಲಿ ಕಸದ ರಾಶಿ ಚರಂಡಿ ತುಂಬ ಕೊಳತು ನಾರುವ ತರಕಾರಿಗಳ ರಾಶಿ ಅಲ್ಲಿಯೇ ಮೀನು, ಕೋಳಿ ಅಂಗಡಿ ಹೀಗೆ ಕಲುಷಿತ ನೀರು ಚರಂಡಿಯಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಆಶ್ರಯ ತಾಣವನ್ನಾಗಿಸಿದೆ.

ಇನ್ನಾದರೂ ಸಂಬಂದಪಟ್ಟ ಗ್ರಾಮಾಡಳಿತ ಇತ್ತ ಗಮನಹರಿಸಿ ಬೀದಿ ದೀಪ ಮತ್ತು ಸಂತೆ ಮಾರುಕಟ್ಟೆಯನ್ನು ಸ್ವಚ್ಚಗೊಳಿಸುವರೇ ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *