ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ – ಆರ್ ಎಂಎಂ ಬಣಕ್ಕೆ ಮೇಲುಗೈ | ಗೆದ್ದು ಬೀಗಿದ ಶಾಸಕ ಬೇಳೂರು | DCC bank director election

ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ – ಆರ್ ಎಂಎಂ ಬಣಕ್ಕೆ ಮೇಲುಗೈ | ಗೆದ್ದು ಬೀಗಿದ ಶಾಸಕ ಬೇಳೂರು

ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಮಕಾಡೆ ಮಲಗಿದ್ದಾರೆ.

ಡಿಸಿಸಿ ಬ್ಯಾಂಕ್ ನ  ಹೊಸನಗರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂಎಂ ಪರಮೇಶ್  ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ನಡುವಿನ ಬಿಗ್ ಫೈಟ್ ನಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಗೆದ್ದು ಬೀಗಿದ್ದಾರೆ.

ಆರ್.ಎಂ.ಮಂಜುನಾಥ ಗೌಡ, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಬಸವಾನಿ ವಿಜಯದೇವ್, ಎಸ್ ಪಿ ಚಂದ್ರಶೇಖರ ಗೌಡ, ಕೆ.ಪಿ.ರುದ್ರಗೌಡ, ಜಿ.ಎನ್.ಸುಧೀರ, ಎಸ್.ಕೆ.ಮರಿಯಪ್ಪ, ಪಿ.ಎಲ್.ಬಸವರಾಜ್, ಮಹಾಲಿಂಗ ಶಾಸ್ತ್ರೀ, ಟಿ.ಶಿವಶಂಕರಪ್ಪ ಬೇರೆ ಬೇರೆ ಕ್ಷೇತ್ರಗಳಿಂದ ಇಂದು ನಡೆದ ಚುನಾವಣೆಯಲ್ಲಿ ಗೆದ್ದು ಬೀಗಿದರು.
ಇಲ್ಲಿ ಕ್ಷೇತ್ರವಾರು ಗೆದ್ದವರ ಮತ್ತು ಸೋತವರ ವಿವರ ಹಾಕಲಾಗಿದೆ. ಹೆಸರುಗಳ ಪಕ್ಕದಲ್ಲಿ ಅವರು ಪಡೆದ ಮತಗಳ ವಿವರ ಇದೆ.

ಕ್ಷೇತ್ರ೧ – ಶಿವಮೊಗ್ಗ ತಾಲ್ಲೂಕು
– ಕೆ.ಪಿ.ದುಗ್ಗಪ್ಪ ಗೌಡ(13)
– ಶಿವನಂಜಪ್ಪ (12)

ಭದ್ರಾವತಿ ತಾಲ್ಲೂಕು
– ಹೆಚ್.ಎಲ್.ಷಡಾಕ್ಷರಿ(7)
– ಸಿ.ಹನುಮಂತಪ್ಪ( 9)

ತೀರ್ಥಹಳ್ಳಿ ತಾಲ್ಲೂಕು
– ಬಸವಾನಿ ವಿಜಯದೇವ್(14)
-ಕೆ.ಎಸ್.ಶಿವಕುಮಾರ್(9)

ಸಾಗರ ತಾಲ್ಲೂಕು
– ಗೋಪಾಲಕೃಷ್ಣ ಬೇಳೂರು(15)
– ರತ್ನಾಕರ ಹುನಗೋಡು(14)

ಶಿಕಾರಿಪುರ ತಾಲ್ಲೂಕು
– ಅಗಡಿ ಅಶೋಕ್(11)
-ಎಸ್.ಪಿ. ಚಂದ್ರಶೇಖರ ಗೌಡ(26)

ಸೊರಬ ತಾಲ್ಲೂಕು
– ಕೆ.ಪಿ.ರುದ್ರಗೌಡ(14)
– ಶಿವಮೂರ್ತಿ ಗೌಡ(10)

ಹೊಸನಗರ ತಾಲ್ಲೂಕು
– ಎಂ.ಎಂ.ಪರಮೇಶ್
(ಅವಿರೋಧ ಆಯ್ಕೆ)

ಕ್ಷೇತ್ರ-2
ಶಿವಮೊಗ್ಗ ಉಪವಿಭಾಗ
– ಆರ್.ಎಂ.ಮಂಜುನಾಥ ಗೌಡ(15)
– ವಿರೂಪಾಕ್ಷಪ್ಪ(3)
ತಿರಸ್ಕೃತ-೧

ಸಾಗರ ಉಪವಿಭಾಗ
– ಬಿ.ಡಿ.ಭೂಕಾಂತ್(21)
-ಜಿ.ಎನ್.ಸುಧೀರ(23)

ಕ್ಷೇತ್ರ-3
ಶಿವಮೊಗ್ಗ ಉಪವಿಭಾಗ
-ಎಸ್.ಪಿ.ದಿನೇಶ(16)
– ಎಸ್.ಕೆ.ಮರಿಯಪ್ಪ(39)

ಸಾಗರ ಉಪವಿಭಾಗ
– ಬಸವರಾಜ್ ಪಿ.ಎಲ್.(32)
– ರವೀಂದ್ರ ಹೆಚ್.ಎಸ್.(21)
– ತಿರಸ್ಕೃತ(3)

ಕ್ಷೇತ್ರ- 4
ಶಿವಮೊಗ್ಗ ಉಪವಿಭಾಗ
– ಡಿ.ಆನಂದ(16)
– ಕೆ.ಎಲ್.ಜಗದೀಶ್ವರ್(45)
-ಮಹಾಲಿಂಗಯ್ಯ ಶಾಸ್ತ್ರೀ(47)
– ಜೆ.ಪಿ.ಯೋಗೇಶ್ (14)

ಸಾಗರ ಉಪವಿಭಾಗ
– ಟಿ.ಶಿವಶಂಕರಪ್ಪ(75)
– ಎಂ.ಡಿ.ಹರೀಶ್(61)
– ತಿರಸ್ಕೃತ (1)

Leave a Reply

Your email address will not be published. Required fields are marked *