ಮಾಜಿ ಶಾಸಕ ಬಿ ಸ್ವಾಮಿರಾವ್ ರವರಿಗೆ ಡಿ.ದೇವರಾಜ್ ಅರಸು ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಗೃಹ ಸಚಿವರಿಗೆ ಮನವಿ :

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ರವರ ಜನ್ಮ ದಿನದ ಅಂಗವಾಗಿ ನೀಡುವ ಡಿ. ದೇವರಾಜ ಅರಸು 2021-22 ರ ಸಾಲಿನ ಪ್ರಶಸ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಮುಖಂಡರಾದ ಬಿ. ಸ್ವಾಮಿರಾವ್ ರವರಿಗೆ ನೀಡಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಮನವಿ ಸಲ್ಲಿಸಲಾಯಿತು.



ಕರ್ನಾಟಕ ರಾಜ್ಯದ ದಮನಿತರ ಮತ್ತು ಗೇಣಿ ರೈತರ ಧ್ವನಿಯಾಗಿ ಜಾರಿಗೆ ತಂದ ಭೂ ಸುಧಾರಣಾ ಕಾನೂನಿನ ಹರಿಕಾರ ಡಿ. ರೇವರಾಜ ಅರಸು ರವರ ಹೆಸರಿನಲ್ಲಿ ಪ್ರತಿ ವರ್ಷ ಆಗಸ್ಟ್ 20 ರಂದು ನೀಡುವ ಪ್ರಶಸ್ತಿಯನ್ನು ಗೇಣಿ ರೈತರ ಪರವಾಗಿ 1950 ರ ದಶಕದಲ್ಲಿ ಮಲೆನಾಡಿನ ತೀರ್ಥಹಳ್ಳಿ, ಹೊಸನಗರ,ಸಾಗರ ಮತ್ತು ಸೊರಬಗಳಲ್ಲಿ ಗೇಣಿ ರೈತರ ಪರವಾಗಿ ಧ್ವನಿ ಎತ್ತಿದ್ದ ಬಿ ಸ್ವಾಮಿರಾವ್ ರವರಿಗೆ ನೀಡಿದರೆ ದೇವರಾಜು ಅರಸು ಪ್ರಶಸ್ತಿಗೂ ಒಂದು ಗೌರವ ಸಲ್ಲುತ್ತದೆ ಆದ್ದರಿಂದ ಕೂಡಲೇ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ರವರಿಗೆ ಡಿ ದೇವರಾಜ್ ಆರಸು ಪ್ರಶಸ್ತಿಗೆ ಮಾಜಿ ಶಾಸಕ ಬಿ ಸ್ವಾಮಿರಾವ್ ಹೆಸರನ್ನು ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು.



ಈ  ಸಂದರ್ಭದಲ್ಲಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪ್ರಮುಖರಾದ ಕಲ್ಲೂರು ಮೇಘರಾಜ್,ಅರ್ ಎ ಚಾಬುಸಾಬ್, ಹೊಳೆಮಡಿಲು ವೆಂಕಟೇಶ್, ತೊರೆಗದ್ದೆ ವಾಸಪ್ಪ ಗೌಡ,ಟಿ ಆರ್ ಕೃಷ್ಣಪ್ಪ ,ಕಲ್ಲೂರು ಈರಣ್ಣ, ಎಲ್.ಆರ್. ಗೋಪಾಲಕೃಷ್ಣ, ಕೋಡ್ಲು ಶ್ರೀಧರ್, ಸತೀಶ್ ಭಟ್,ಶಂಕರ್ ನಾಯ್ಕ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *