Headlines

ಮೋದಿ ಸಂಪುಟದಲ್ಲಿ ಕರ್ನಾಟಕದ ಸಚಿವರು, ಖಾತೆಗಳ ವಿವರ:

ಬೆಂಗಳೂರು, ಜುಲೈ 08; ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಿದ್ದಾರೆ. ಹಲವು ಸಚಿವರನ್ನು ಕೈ ಬಿಟ್ಟಿದ್ದು 43 ಸಚಿವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಸಂಪುಟದ ಸಚಿವರ ಒಟ್ಟು ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ನಾಲ್ವರು ಪ್ರಧಾನಿ ಮೋದಿ ಸಂಪುಟವನ್ನು ಸೇರಿದ್ದಾರೆ. ಬುಧವಾರ ಸಂಜೆ ಪ್ರಮಾಣ ವಚನ ಸಮಾರಂಭ ನಡೆದಿದೆ, ಖಾತೆಗಳ ಹಂಚಿಕೆಯೂ ರಾತ್ರಿ ಮುಗಿದಿದೆ. ಹೊಸದಾಗ ಸೇರ್ಪಡೆಗೊಂಡ ಎಲ್ಲರಿಗೂ ರಾಜ್ಯ ಸಚಿವರಾಗಿದ್ದಾರೆ.

ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ? ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ?

ನರೇಂದ್ರ ಮೋದಿ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 25 ಸಂಸದರು ಕರ್ನಾಟಕದಿಂದ ಆಯ್ಕೆಯಾಗಿದ್ದು, ರಾಜ್ಯಕ್ಕೆ 6 ಸಚಿವ ಸ್ಥಾನ ಸಿಕ್ಕಿದೆ.

ಸಚಿವ ಸ್ಥಾನಕ್ಕೆ ಡಿ. ವಿ. ಸದಾನಂದ ಗೌಡ ರಾಜೀನಾಮೆಸಚಿವ ಸ್ಥಾನಕ್ಕೆ ಡಿ. ವಿ. ಸದಾನಂದ ಗೌಡ ರಾಜೀನಾಮೆ

ಮೋದಿ ಸಂಪುಟದಲ್ಲಿ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್ ಸಚಿವರಾಗಿ ಮುಂದುವರೆದಿದ್ದಾರೆ. ಪ್ರಸ್ತುತ ಕರ್ನಾಟಕದಿಂದ 6 ಸಚಿವರು ಕೇಂದ್ರ ಸಂಪುಟದಲ್ಲಿದ್ದಾರೆ. ಅದರಲ್ಲಿ ಪ್ರಬಲವಾದ ಹಣಕಾಸು ಖಾತೆ ನಮ್ಮ ರಾಜ್ಯದಿಂದ ಆಯ್ಕೆಯಾದವರ ಕೈಯಲ್ಲಿಯೇ ಇದೆ.

 ಕೇಂದ್ರ ಸಂಪುಟ ವಿಸ್ತರಣೆ ರಾಜ್ಯದ ಸಚಿವರ ವಿವರ ಹೀಗಿದೆ.

ಸಚಿವ ಪ್ರಹ್ಲಾದ್ ಜೋಶಿ.

ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಮೋದಿ ಸಂಪುಟದಲ್ಲಿದ್ದಾರೆ. ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯನ್ನು ಅವರು ಹೊಂದಿದ್ದಾರೆ. 2019ರ ಚುನಾವಣೆ ಬಳಿಕ ಪ್ರಹ್ಲಾದ್ ಜೋಶಿ ಮೋದಿ ಸಂಪುಟವನ್ನು ಸೇರಿದ್ದಾರೆ.


ನಿರ್ಮಲಾ ಸೀತಾರಾಮನ್.

ರಾಜ್ಯಸಭೆ ಸದಸ್ಯರು. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪ್ರಭಾವಿ ಖಾತೆಯಾದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ಅವರು ಹೊಂದಿದ್ದಾರೆ.

ಶೋಭಾ ಕರಂದ್ಲಾಜೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 2 ಬಾರಿ ಗೆದ್ದಿರುವ ಶೋಭಾ ಕರಂದ್ಲಾಜೆ (54) ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿದ್ದಾರೆ.

ರಾಜೀವ್ ಚಂದ್ರಶೇಖರ್

ಉದ್ಯಮಿಯೂ ಆಗಿರುವ ರಾಜೀವ್ ಚಂದ್ರಶೇಖರ್ (57) ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 3ನೇ ಬಾರಿ ರಾಜ್ಯಸಭಾ ಸದಸ್ಯರಾಗಿರುವ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ, ಎಲೆಕ್ಟ್ರಾನ್ಸಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು.

ಎ. ನಾರಾಯಣ ಸ್ವಾಮಿ

ಚಿತ್ರದುರ್ಗದ ಸಂಸದರಾದ ಎ. ನಾರಾಯಣ ಸ್ವಾಮಿ (64) ಪ್ರಧಾನಿ ಮೋದಿ ಸಂಪುಟ ಸೇರಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು. ಮೊದಲ ಬಾರಿಗೆ ಲೋಕಸಭಾ ಸದಸ್ಯರಾದ ನಾರಾಯಣ ಸ್ವಾಮಿ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ.

ಸಾಮಾನ್ಯ ಕಾರ್ಯಕರ್ತನಾಗಿ ಕೇಂದ್ರ ಮಂತ್ರಿಯಾದ ಎ. ನಾರಾಯಣಸ್ವಾಮಿ ವ್ಯಕ್ತಿ ಚಿತ್ರಸಾಮಾನ್ಯ ಕಾರ್ಯಕರ್ತನಾಗಿ ಕೇಂದ್ರ ಮಂತ್ರಿಯಾದ ಎ. ನಾರಾಯಣಸ್ವಾಮಿ ವ್ಯಕ್ತಿ ಚಿತ್ರ

ಭಗವಂತ ಖೂಬಾ.

54 ವರ್ಷದ ಭಗವಂತ ಖೂಬಾ ಬೀದರ್‌ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರು.



ವರದಿ:ರಾಮನಾಥ್

Leave a Reply

Your email address will not be published. Required fields are marked *