Headlines

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ::”ಸಮಾಜ ಸೇವೆಯಿಂದ ನೆಮ್ಮದಿಯ ಬದುಕು ಸಾಧ್ಯ “:::ಜೈ ವಿಠಲ್

ರಿಪ್ಪನ್ ಪೇಟೆ :ಸಮಾಜ ಸೇವೆಯ ಮೂಲಕ ಮಾನವ ತನ್ನ ಬದುಕಿನಲ್ಲಿ ಶಾಂತಿ  ಮತ್ತು ನೆಮ್ಮದಿಯನ್ನು ಕಂಡು ಕೊಳ್ಳಬಹುದು ಎಂದು ರೋಟರಿ ಜಿಲ್ಲಾ ೩೧೮೨ ರ ಡಿಸ್ಟ್ರಿಕ್ಟ್ ಇಂಟಾರಾಕ್ಟ್ ಛೇರ್ಮನ್  ಪಿ.ಹೆಚ್.ಎಪ್.ಕೆ.ಎಸ್ ಜೈ ವಿಠಲ್ ಹೇಳಿದರು.

ಪಟ್ಟಣದ ಜಿ.ಎಸ್.ಬಿ. ಕಲ್ಯಾಣಮಂದಿರದಲ್ಲಿ ಬುಧವಾರ ಸಂಜೆ  ಆಯೋಜಿಸಿದ್ದ ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ  ೨೦೨೧-೨೦೨೨ ರ ಪದಾಧಿಕಾರಿಗಳ ಪದವಿ ಸ್ವೀಕಾರ  ಸಮಾರಂಭದಲ್ಲಿ ಪದವಿ  ಪ್ರಧಾನ ಮಾಡಿ  ಮಾತನಾಡಿದ ಅವರು ರೋಟರಿ ಸಂಸ್ಥೆ ಅಂತರ್ ರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಸ್ಥಾಪನೆಯ  ಮೂಲ ಉದ್ದೇಶ ಸಮಾಜ  ಸೇವೆ. ಜಗತ್ತಿನ  ವಿವಿಧ ರಾಷ್ಟ್ರಗಳಲ್ಲಿ ಆರೋಗ್ಯ. ಶಿಕ್ಷಣ ಮತ್ತು ಸಾಮಾಜಿಕ  ಕ್ಷೇತ್ರದಲ್ಲಿ ಹಗಲಿರಳು  ಶ್ರಮಿಸುತ್ತಿರುವ ರೋಟರಿ ಸಂಸ್ಥೆಯು ಸೇವೆಗಾಗಿ ಬದುಕನ್ನು ಬದಲಿಸು ಎಂಬ ಧ್ಯೇಯವಾಕ್ಯ ದೊಂದಿಗೆ ಮುಂದೆ ಸಾಗುತ್ತಿದೆ.

ಉತ್ತಮ ಆರೋಗ್ಯ ಮತ್ತು ಶಿಕ್ಷಣ  ಪ್ರತಿಯೊಬ್ಬರಿಗೂ ದೊರಕಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ  ಹಂಬಲವನ್ನು ಹೊಂದಿರುವವರಿಗೆ ರೋಟರಿ ಸಂಸ್ಥೆ  ಉತ್ತಮ ವೇದಿಕೆಯಾಗಿದೆ  ಎಂದರು.

ರೋಟರಿ ಜಿಲ್ಲಾ ೩೧೮೨ ರ  ಅಸಿಸ್ಟೆಂಟ್ ಗವರ್ನರ್ ಎಲ್. ಟಿ. ತಿಮ್ಮಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿದ್ದು ಸಾಮಾಜಿಕ ಕ್ಷೇತ್ರದಲ್ಲಿ ಗಣನಿಯವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಪಂಚದ  ಅತ್ಯುತ್ತಮ ಸೇವಾ ಸಂಸ್ಥೆಯಾಗಿ ಜನಮನ್ನಣೆ  ಗಳಿಸುವುದರ  ಮೂಲಕ  ಕಳೆದ ಒಂದು ಶತಮಾನದಿಂದ  ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿದೆ ಎಂದರು.

ರಿಪ್ಪನ್ ಪೇಟೆ ರೋಟರಿ ಸಂಸ್ಥೆಯ  ನೂತನ  ಅಧ್ಯಕ್ಷರಾಗಿ ಪದವಿ ಸ್ವೀಕರಿಸಿ ಮಾತನಾಡಿದ ಆರ್ ನಾಗಭೂಷಣ ಸಮಾಜ ಸೇವೆಯನ್ನು ಮಾಡುವ ಸದುದ್ದೇಶ ಹೊಂದಿದವರಿಗೆ ರೋಟರಿ ಸಂಸ್ಥೆ ಉತ್ತಮ ವೇದಿಕೆಯಾಗಿದೆ. ಪುರುಷ ಮತ್ತು ಮಹಿಳೆ ಎಂಬ ಭೇದ ಭಾವನೆಯಿಲ್ಲದೇ  ಈ ಸಂಸ್ಥೆಯಲ್ಲಿ ಸೇರಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳ ಬಹುದು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಝೋನಲ್ ಲೆಫ್ಟಿಂನೆಂಟ್ ಗಣೇಶ್. ಎನ್. ಕಾಮತ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ. ಬಿ. ಲಕ್ಷ್ಮಣ ಗೌಡ,ಪಿ. ಜೆ ವರ್ಗೀಸ್,ಹೆಚ್ ಎಂ ವರ್ತೇಶ್, ಗಣೇಶ್ ಆರ್, ರಾಧಾಕೃಷ್ಣ ಎಚ್ ಎ,ಸಾಜಿ ಜಾಕೋಬ್. ಎಂ. ಬಿ. ಮಂಜುನಾಥ್ ಇನ್ನಿತರರು ಉಪಸ್ತಿತರಿದ್ದರು.

ಕೃಷ್ಣರಾಜು  ಪ್ರಾರ್ಥಿಸಿ, ರೋಟರಿ  ಅಧ್ಯಕ್ಷ ಜೆ. ರಾಧಾಕೃಷ್ಣ  ಸ್ವಾಗತಿಸಿ.ಸಬಾಸ್ಟಿನ್ ಮ್ಯಾಥ್ಯೂಸ್ ನಿರೂಪಿಸಿ ಕಾರ್ಯದರ್ಶಿ  ಡಾಕಪ್ಪ  ವಂದಿಸಿದರು.


ವರದಿ:ಸೆಬಾಸ್ಟಿಯನ್ ಮ್ಯಾಥ್ಯೂಸ್‌

Leave a Reply

Your email address will not be published. Required fields are marked *