
ಮನೆಗೆ ನುಗ್ಗಿ ಚಿನ್ನದ ಓಲೆ, ಹಣ ತಗೊಂಡು ಹೋದ ಮೈಕ್ರೋ ಫೈನಾನ್ಸ್ ಸಿಬ್ಬಂದಿ | ದೂರು ದಾಖಲು
ಮನೆಗೆ ನುಗ್ಗಿ ಚಿನ್ನದ ಓಲೆ, ಹಣ ತಗೊಂಡು ಹೋದ ಮೈಕ್ರೋ ಫೈನಾನ್ಸ್ ಸಿಬ್ಬಂದಿ | ದೂರು ದಾಖಲು ಕರ್ನಾಟಕದಲ್ಲಿ ಸುಗ್ರೀವಾಜ್ಞೆ ಜಾರಿಯಾದರೂ ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ನಿಲ್ಲುತ್ತಿಲ್ಲ. ಕಂತು ವಸೂಲಿಗೆ ಬಂದಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಮನೆಯಲ್ಲಿದ್ದ ಚಿನ್ನದ ಓಲೆ, ಹಣ ತೆಗೆದುಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಫೈನಾನ್ಸ್ ಸಿಬ್ಬಂದಿ ವಿರುದ್ಧ ಸಾಲ (loan) ಮಾಡಿದ್ದ ಸಂಪವ್ವ ತಳಗಟ್ಟಿ ದೂರು ನೀಡಿದ್ದು, ರಟ್ಟಿಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ….