ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಆಟೋ ಚಾಲಕ
ಫೈನಾನ್ಸ್ ಗಳ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಬಜಾಜ್ ಮತ್ತು ಟಿವಿಎಸ್ ಫೈನಾನ್ಸ್ ನಿಂದ ಸಾಲ ಪಡೆದ ಆಟೋ ಚಾಲಕ ವಿದ್ಯಾನಗರದ ರೈಲ್ವೆ ಗೇಟ್ ಬಳಿ ವಿಷ ಸೇವಿಸಿ ಮಲಗಿದ್ದ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಬಜಾಜ್ ನಲ್ಲಿ 1.40 ಸಾಲ ಪಡೆದಿದ್ದರು. ಇದಕ್ಕೆ ತಿಂಗಳು 8.031 ಕಂತು ಕಟ್ಟುತ್ತಿರುವುದಾಗಿ.ಒಂದು ವರ್ಷ ತೀರಿಸಿರುವುದಾಗಿ ವಿಷ ಸೇವಿಸಿದ ಚಾಲಕ ವಿವರಿಸಿದ್ದಾರೆ ಮತ್ತು ಟಿವಿಎಸ್ ಫೈನಾನ್ಸ್ ನಲ್ಲಿ 1.55 ಲಕ್ಷ ಸಾಲ ಮಾಡಿದ್ದು. 25 ಕಂತು ಹಣ ತುಂಬಿದ್ದಾರೆ. ಆದರೂ ಫೈನಾನ್ಸ್ ನವರು ನಿನ್ನೆ ಏಳು ಗಂಟೆಗೆ ಬಂದು ಮನೆ ಕದತಟ್ಟುತ್ತಾರೆ ಎಂದು ಆಟೋ ಚಾಲಕ ಆರೋಪಿಸಿದ್ದಾರೆ. ಈ ತಿಂಗಳು ಕಟ್ಟಿಲ್ಲ. ಹಾಗಾಗಿ ಮನೆಗೆ ಬಂದು ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಆಟೋ ಚಾಲಕನಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ನಿನ್ನೆ ಸಂಜೆ ಟಾರ್ಚರ್ ತಡೆಯಲಾಗದೆ ಚಿಕ್ಕಲ್ ಫ್ಲೈಓವರ್ ಕೆಳಗೆ ವಿಷ ಸೇವಿಸಿ ಮಲಗಿದ್ದ ನಾಗೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಹೆಂಡತಿ ಹೆರಿಗೆ ವೇಳೆ ನಾಗೇಶ್ ಸಾಲ ಮಾಡಿದ್ದರು. ಎರಡೂ ಫೈನಾನ್ಸ್ ಗೆ ಒಟ್ಟು 27 ಕಂತು ತುಂಬಿದ್ದರು. ಈ ತಿಂಗಳು ಸಾಲ ಕಟ್ಟಲು ಸಾಧ್ಯವಾಗಿಲ್ಲ. ಮನೆಗೆ ಯಾವ ಸಮಯದಲ್ಲಿ ಫೈನಾನ್ಸ್ ಅವರು ಕದತಟ್ಟುತ್ತಾರೋ ಗೊತ್ತಿಲ್ಲ ಎಂಬ ಭಯಕ್ಕೆ ನಾಗೇಶ್ ಹೆದರಿ ವಿಷ ಸೇವಿಸಿದ್ದಾರೆ.
ಮೂರು ಬಾರಿ ಚೆಕ್ ಬೌನ್ಸ್ ಮಾಡಿ ಬಡ್ಡಿ ಹೆಚ್ಚಿಗೆ ಆರೋಪ ಮಾಡಲಹಾಕಲಾಗುತ್ತಿದೆ. ನಮಗೆ ಕರೆ ಮಾಡಿ ಅವರೇ ಸಾಲ ನೀಡಿದ್ದಾರೆ. ವಸೂಲಿಗೆ ಬರುವರಿಗೆ ಐಡಿ ಕಾರ್ಡ್ ತೋರಿಸಿ ಎಂದರೆ ನಿನಗೆ ಏನು ತೋರಿಸುವುದಾಗಿ ಗದರಿಸುತ್ತಾರೆ. ಅವರು ಯಾರ ಕಡೆ ಎಂಬುದು ಗೊತ್ತಿಲ್ಲ ಎಂದು ಆಟೋ ಚಾಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.


