POSTMAN NEWS

ನೈಜ ಸುದ್ದಿ ನೇರ ಬಿತ್ತರ..

ವಿಶ್ವ ಶಾಂತಿ, ಭ್ರಾತೃತ್ವ ಧರ್ಮಸಂದೇಶ ಸಾರಿದಶ್ರೀ ಆದಿನಾಥ ತೀರ್ಥಂಕರರು ಪ್ರಾತಃಸ್ಮರಣೀಯರು ; ಹೊಂಬುಜ ಸ್ವಾಮೀಜಿ

GridArt 20250128 213029847.jpg

ವಿಶ್ವ ಶಾಂತಿ, ಭ್ರಾತೃತ್ವ ಧರ್ಮಸಂದೇಶ ಸಾರಿದಶ್ರೀ ಆದಿನಾಥ ತೀರ್ಥಂಕರರು ಪ್ರಾತಃಸ್ಮರಣೀಯರು ; ಹೊಂಬುಜ ಸ್ವಾಮೀಜಿ

ಜೈನ ಧರ್ಮದ ಪ್ರಥಮ ತೀರ್ಥಂಕರ ಶ್ರೀ 1008 ಆದಿನಾಥ ತೀರ್ಥಂಕರರವರು ಜೈನ ಧರ್ಮದ ಮೂಲ ಸಿದ್ಧಾಂತಗಳನ್ನು, ವಿಶ್ವದಲ್ಲೆಲ್ಲ ಶಾಂತಿ, ಭ್ರಾತೃತ್ವದ ಧರ್ಮ ಸಂದೇಶವನ್ನು ಸಾರಿದವರು ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಆದಿನಾಥ ಸ್ವಾಮಿಯವರು ಮೋಕ್ಷಕಲ್ಯಾಣ ಮಹೋತ್ಸವದ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಪ್ರವಚನದಲ್ಲಿ ತಿಳಿಯಬಯಸಿದರು.

ಅಸಿ, ಮಸಿ, ಕೃಷಿ, ಆದಿ ವಿದ್ಯೆಗಳನ್ನು ಮನುಕುಲಕ್ಕೆ ಹೇಳಿ ಕೊಟ್ಟ ಆದಿನಾಥರು ಬ್ರಾಹ್ಮಿ ಸುಂದರಿಯರಿಗೆ ವಿಧ್ಯೆ ಹೇಳಿಕೊಡುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟವರು. ಅಂತಿಮವಾಗಿ ಕೈಲಾಸ ಪರ್ವತದಲ್ಲಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಮೋಕ್ಷಕ್ಕೆ ಹೋದರು.

ಅಹಿಂಸಾ ಧರ್ಮ ಪಥದಲ್ಲಿ ಪ್ರಾಣಿ ಪಕ್ಷಿಗಳ, ಸಸ್ಯ ಜೀವಿಗಳ ಸಂರಕ್ಷಣೆ ಮಾಡಬೇಕು. ಮಾನವ ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯದ ಮನೋಭಾವವು ಸರ್ವತ್ರ ಪಸರಿಸಲು ಶ್ರೀ ಆದಿನಾಥ ತೀರ್ಥಂಕರ ಪ್ರಣೀತ ಜೈನ ಧರ್ಮ ಸಾರದ ಸತ್‌ಪರಿಣಾಮದಿಂದ ಅಕ್ಷಯ ಸುಖ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿ, ಪ್ರಾತಃಸ್ಮರಣೀಯರಾಗಿರುವರು ಎಂಬ ಶುಭ ಭಾವನೆಯನ್ನು ಸ್ವಸ್ತಿಶ್ರೀಗಳವರು ಹೇಳಿ, ಭಕ್ತರನ್ನು ಹರಸಿ, ಆಶೀರ್ವದಿಸಿದರು.

ಹೊಂಬುಜ ಶ್ರೀಕ್ಷೇತ್ರ ನಗರ ಜಿನಾಲಯದಲ್ಲಿ ಭಕ್ತವೃಂದ, ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀ ಆದಿನಾಥ ಸ್ವಾಮಿಯ ಪೂಜೆ ನೆರವೇರಿಸಿದರು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಸರಸ್ವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸ್ತೋತ್ರಗಳನ್ನು ಪಠಿಸಿ, ಪೂಜೆ ಸಮರ್ಪಿಸಲಾಯಿತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.