Headlines

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ

ಹೊಸನಗರ ತಾಲೂಕಿನ ನಗರ ಮೂಲದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ  ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.ಇವರು ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು ಎನ್ನಲಾಗಿದೆ.

ಪ್ರಕಾಶರವರು ಕೋಳಿ ಅಂಗಡಿ ನಡೆಸಿಕೊಂಡಿದ್ದರು. ಜ.24 ರಂದು ಅಶ್ವಿನಿಯು ಗರ್ಭಿಣಿಯಾಗಿರುವುದು ತವರು ಮನೆಗೆ ತಿಳಿಸಿದ್ದರು. ಆದರೆ ಜ.26 ರಂದು ರಕ್ತಸ್ರಾವವಾಗಿದ್ದರಿಂದ ಸಾಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು.

ಕಳೆದ ಒಂದುವರೆ ವರ್ಷದ ಹಿಂದೆ ಅಶ್ವಿನಿಗೆ ಮದುವೆಯಾಗಿತ್ತು. ನಿನ್ನೆ ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿ ಅಶ್ವಿನಿ ದಾಖಲಾಗಿದ್ದಳು. ಅಶ್ವಿನಿಗೆ ಗರ್ಭಪಾತವಾದ ಹಿನ್ನೆಲೆಯಲ್ಲಿ ತೀವ್ರವಾಗಿ ರಕ್ತಸ್ರಾವ ಆಗಿತ್ತು. ಈ ವೇಳೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ.

ಶಿವಮೊಗ್ಗ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಅಶ್ವಿನಿ ಸಾವನಪ್ಪಿದ್ದಾಳೆ.ಕುಟುಂಬಸ್ಥರು ಈಗ ಸಾಗರ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ ಆರೋಪ ಮಾಡಿದ್ದು ವೈದ್ಯರ ವಿರುದ್ಧ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *