ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು ,ಏಳು ಜನರ ಸ್ಥಿತಿ ಗಂಭೀರ
ಸಾಗರ – ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಯ ಆಲಳ್ಳಿ ಗ್ರಾಮದ ಬಳಿ ಕಾರು ಹಾಗೂ ಬಸ್ ನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ನಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟು ,ಏಳು ಜನ ಗಂಬೀರ ಗಾಯಗೊಂಡಿರುವ ಘಟನೆ ನಡೆದಿದೆ. ಚನ್ನಗಿರಿ ಮೂಲದ 8 ಜನರಿದ್ದ ಇಕೋ ಕಾರಿನಲ್ಲಿ ಜೋಗ ಜಲಪಾತವನ್ನು ವೀಕ್ಷಿಸಿ ವಾಪಾಸ್ ಹಿಂದಿರುಗುತ್ತಿದ್ದಾಗ ಸಾಗರದಿಂದ ತಾಳಗುಪ್ಪದ ಕಡೆಗೆ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹೋಗುತ್ತಿದ್ದ ಬಸ್ ಗೆ ಮುಖಾಮುಖಿ ಡಿಕ್ಕಿಯಾಗಿದೆ. ಎಲ್ಲಾರು ಒಂದೇ ಕುಟುಂಬದವರಾಗಿದ್ದು…
 
                         
                         
                         
                         
                         
                         
                         
         
        