ರಿಪ್ಪನ್‌ಪೇಟೆ – ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಮದರಸ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ
ರಿಪ್ಪನ್‌ಪೇಟೆ : ಪಟ್ಟಣದ ಎಸ್ ಎಸ್ ಎಫ಼್ ಸಂಘಟನೆ ವತಿಯಿಂದ ತಅಝೀಜುಲ್ ಅರಬ್ಬಿಕ್ ಮದರಸ ವಿದ್ಯಾರ್ಥಿಗಳಿಂದ ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ವಿನಾಯಕ ವೃತ್ತದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ SSF ಸಂಘಟನೆಯಿಂದ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ರ‍್ಯಾಲಿಯನ್ನು ಆಯೋಜಿಸಲಾಗಿದೆ.
SSF ಸಂಘಟನೆಯು ಕರ್ನಾಟಕ ರಾಜ್ಯವಲ್ಲದೇ ದೇಶಾದ್ಯಂತ ಕಲೇದ 50 ವರ್ಷಗಳಿಂದ ಯಾವುದೇ ಗುಂಪುಗಾರಿಕೆ ನಡೆಸದೇ ,ಕಳಂಕವಿಲ್ಲದೇ,ಕಪ್ಪುಚುಕ್ಕೆಯಿಲ್ಲದೇ ನಡೆದುಕೊಂಡು ಬರುತ್ತಿರುವ ಸಂಸ್ಥೆಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕು,ನಾವೆಲ್ಲಾರೂ ಭಾರತೀಯರು ಎನ್ನುವುದೇ SSF ನ ಮೂಲ ಉದ್ದೇಶವಾಗಿದೆ ಎಂದರು.
ರ‍್ಯಾಲಿ ಪ್ರಾರಂಭಕ್ಕೂ ಮುನ್ನ ಎಲ್ಲಾ ಮಕ್ಕಳನ್ನುದ್ದೇಶಿಸಿ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಮಾತನಾಡಿದರು.
ಗ್ರಾಪಂ ಸದಸ್ಯ ಆಸೀಫ಼್ ಭಾಷಾ , ಜನಪರ ಹೋರಾಟಗಾರ ಆರ್ ಎನ್ ಮಂಜುನಾಥ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ SSF ಸಂಘಟನೆಯ ರಿಪ್ಪನ್‌ಪೇಟೆ ಶಾಖೆ ಅಧ್ಯಕ್ಷ ಅಜ್ಮಲ್ , ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ರಫ಼ಿ,ಕಾರ್ಯದರ್ಶಿ ಶಫ಼ಿವುಲ್ಲಾ ,ಮುಖಂಡರಾದ ಆರ್ ಎಸ್ ಶಂಶುದ್ದೀನ್ , ಹನೀಫ಼್ ಹಾಗೂ ಇನ್ನಿತರರಿದ್ದರು.