POSTMAN NEWS

ನೈಜ ಸುದ್ದಿ ನೇರ ಬಿತ್ತರ..

RIPPONPETE | ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್‌ಪೇಟೆ

GridArt 20240919 130906465.jpg

RIPPONPETE | ಗಣಪತಿ ಮೆರವಣಿಗೆಯಲ್ಲಿ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಪಾನೀಯ ವಿತರಣೆ | ಸೌಹಾರ್ಧತೆಗೆ ಸಾಕ್ಷಿಯಾದ ರಿಪ್ಪನ್‌ಪೇಟೆ

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಪಟ್ಟಣದ ಮಸೀದಿ ಸಮಿತಿ ವತಿಯಿಂದ ಹಿಂದೂ ಕಾರ್ಯಕರ್ತರಿಗೆ ಪಾನೀಯ ಹಾಗೂ ಕೇಕ್ ವಿತರಿಸಿ ಸೌಹಾರ್ಧತೆ ಮೆರೆದಿದ್ದಾರೆ.

ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ , ಮಕ್ಕಾ ಜುಮ್ಮಾ ಮಸೀದಿ ಹಾಗೂ SSF , SYS ಸಂಘಟನೆಗಳ ವತಿಯಿಂದ ಗವಟೂರಿನಲ್ಲಿ ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ತೊಡಗಿದ್ದ ಹಿಂದೂ ಕಾರ್ಯಕರ್ತರಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ಹಂಚಿ ಗಣಪತಿ ಹಬ್ಬದ ಶುಭಾಶಯ ಕೋರಿದ್ದಾರೆ.

ಪಟ್ಟಣದ ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರಸೇನಾ ವತಿಯಿಂದ 57ನೇ ವರ್ಷದ  ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಂಗಳವಾರ ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮೂಲಕ ಮಂಗಳವಾರ ಸಂಜೆ ಮೆರವಣಿಗೆ ಹೊರಟು ನಾಲ್ಕು ಪ್ರಮುಖ ರಸ್ತೆಗಳಲ್ಲಿ ರಾಜಬೀದಿ ಉತ್ಸವ ನಡೆಸಿ ಬುಧವಾರ ಬೆಳಿಗ್ಗೆ ಹೊಸನಗರ ರಸ್ತೆಯ ತಾವರೆಕೆರೆಯಲ್ಲಿ ಗಣಪತಿ ವಿಸರ್ಜನೆ ನಡೆಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಆಸೀಫ಼್ ಭಾಷಾ,ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ಅಧ್ಯಕ್ಷ ರಾಮಚಂದ್ರ ಬಳೆಗಾರ್ ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ , ಸಿಪಿಐ ಗುರಣ್ಣ ಹೆಬ್ಬಾಳ್ , ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.