ಅಪ್ರಾಪ್ತನಿಂದ ತ್ರಿಬಲ್ ರೈಡಿಂಗ್ – ಬೈಕ್ ಮಾಲೀಕನಿಗೆ 25 ಸಾವಿರ ರೂ.ದಂಡ
ಶಿವಮೊಗ್ಗ : ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇಮಂಡ್ಲಿ ಪಂಪ್ ಹೌಸ್ ಹತ್ತಿರ ಸಂಚಾರಿ ಎಸ್ ಯ ಭಾರತಿ.ಬಿ.ಹೆಚ್, ವಾಹನ ತಪಾಸಣೆ ಮಾಡುವ ಸಮಯದಲ್ಲಿ ಕೆಎ ೧೪-೧೪ ಇ ಡಬ್ಲು ೭೬೧೮ ನಂಬರಿನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕ್ ಅನ್ನು ತಪಾಸಣೆ ಮಾಡಿದಾಗ ಅಪ್ರಾಪ್ತ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಗಿದೆ.
ಜೊತಗೆ ಅಪ್ರಾಪ್ತ ಬಾಲಕನು ಹೆಲ್ಮೆಟ್ ಧರಿಸದೇ ಇರುವುದು, ಡಿಎಲ್ ಇಲ್ಲದೇ ವಾಹನ ಚಾಲನೆ ಮಾಡಿರುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿತ್ತು. ಮೋಟಾರ್ ಬೈಕ್ ಮಾಲೀಕ ಉಮರ್ ಅಲಿ ವಿರುದ್ದ ದೂರು ದಾಖಲಿಸಲಾಗಿತ್ತು.
ನಂತರ ನ್ಯಾಯಾಲಯಕ್ಕೆ ಈ ಬಗ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.ಪ್ರಕರಣ ಪರಿಶೀಲಿಸಿದ ೪ನೇ ಎಸಿಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಮಾಲೀಕನಿಗೆ ರೂ.೨೫,೦೦೦ಗಳನ್ನು ದಂಡ ವಿಧಿಸಿದ್ದಾರೆ.