Headlines

ಪತಿಯಿಂದಲೇ ಪತ್ನಿಯ ಹತ್ಯೆ..!! | Crime News

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಪತ್ನಿಯನ್ನ ಪತಿಯೊಬ್ಬ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕಳೆದ ಬುಧವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.  ರಮ್ಯಾ (೩೬) ಹತ್ಯೆಯಾಗಿದ್ದು, ಈಕೆಯ ಪತಿ ನಾಗಭೂಷಣ್ ಎಂಬುವರು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಾಗಭೂಷಣ್ ಆಟೋ ಚಾಲಕನಾಗಿದ್ದು, ದಂಪತಿಗೆ ಸುಮಾರು ೧೬ ವರ್ಷ ವಯಸ್ಸಿನ ಪುತ್ರ ಇದ್ದಾನೆ. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದರು…

Read More

Thirthahalli | ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತಾರ್ಹ- ಆರಗ ಜ್ಞಾನೇಂದ್ರ

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದು ಸ್ವಾಗತರ್ಹ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಬಂದಿರುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತ ಮಾಡುತ್ತೇನೆ. ಜಗದೀಶ್ ಶೆಟ್ಟರ್ ಎಂಬುವವರು ಕಾಂಗ್ರೆಸ್ ಸಂಸ್ಕೃತಿಯನ್ನು  ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಗುರುವಾರ ಪಟ್ಟಣದಲ್ಲಿ ಮಾತನಾಡಿ ಜಗದೀಶ್ ಶೆಟ್ಟರ್ ಹುಟ್ಟಿನಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ನಲ್ಲಿ ಬೆಳೆದು ಬಂದವರು, ಎಲ್ಲಾ ಸ್ಥಾನಮಾನಗಳು ಗೌರವಗಳು ಅವರಿಗೆ…

Read More

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲಾ : ಸಚಿವ ಈಶ್ವರಪ್ಪ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ‘ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರಪ್ಪ, ವಾಟ್ಸ್ ಆ್ಯಪ್ ನಲ್ಲಿ ಟೈಪ್ ಮಾಡಿರುವ ಡೆತ್ ನೋಟ್ ಬಂದಿದೆ. ಆದರೆ ಸಹಿ ಮಾಡಿರುವ ಯಾವುದೇ ಡೆತ್ ನೋಟ್ ಪತ್ತೆ ಆಗಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಭಷ್ಟಾಚಾರ ಆಗಿಲ್ಲ. ಆದ್ದರಿಂದ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ’ ಎಂದು ಹೇಳಿದರು.  ನಾನು ಸಂತೋಷ್ ಮುಖವನ್ನೇ ನೋಡಿಲ್ಲ….

Read More

ಕ್ರಿಸ್ಮಸ್ ರಜೆ ಹಿನ್ನಲೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು

ಕ್ರಿಸ್ಮಸ್ ರಜೆ ಹಿನ್ನಲೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು ಶಿವಮೊಗ್ಗ: ನಗರದ   ಕಲ್ಲೂರು-ಮಂಡ್ಲಿ ಬಳಿಯ ಬಂಡೆಕಲ್ಲು ಎಂಬಲ್ಲಿ ತುಂಗಾ ಚಾನೆಲ್‌ಗೆ ಕ್ರಿಸ್ಮಸ್ ದಿನದಂದು ಈಜಲು ತೆರಳಿದ್ದ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಮುಳುಗಿ ಸಾವನ್ನಪ್ಪಿದ್ದು, ಗುರುವಾರ  ಶವ ಪತ್ತೆಯಾಗಿದೆ. ಹಳೆ ಮಂಡ್ಲಿ ನಿವಾಸಿ ಮೋಹಿತ್ (೧೫) ಸ್ನೇಹಿತರೊಂದಿಗೆ ಬುಧವಾರ  ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಕಲ್ಲೂರು ಮಂಡ್ಲಿ ಬಳಿಯ ಚಾನೆಲ್ ಬಳಿ ಹೋಗಿದ್ದನು. ನೀರು ನೋಡಿ ಈಜಲು ಹೋದ ಬಾಲಕ ನೀರುಪಾಲಾಗಿದ್ದನು.  ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ…

Read More

ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ : ನೈಟ್ ಕರ್ಫ಼್ಯೂ ಮುಂದುವರಿಕೆ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು(Weekend Curfew)  ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಮಾಡಿದ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದ್ದು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಅಧಿಕೃತ ಘೋಷಣೆ ಮಾಡಿದೆ. ಅದರೊಂದಿಗೆ ಈ ವಾರದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ನೈಟ್ ಕರ್ಫ್ಯೂಅಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೈಟ್ ಕರ್ಫ್ಯೂಅನ್ನು(Night Curfew) ಮುಂದುವರಿಸುವಂತೆ ತಜ್ಞರು ಸಲಹೆ ನೀಡಿದ್ದರೂ, ರಾಜ್ಯ ಸರ್ಕಾರ (Karnataka government) ಇದರಲ್ಲಿ ಕೊಂಚ ಬದಲಾವಣೆ ಮಾಡಿದೆ. ಇದರ ಪ್ರಕಾರ ರಾತ್ರಿ 10…

Read More

ಹರತಾಳು ಹಾಲಪ್ಪ ಸಚಿವರಾಗಲು ನಿಮ್ಮ ಒಂದೊಂದು ಮತವು ಸಹಕಾರಿ – ಬಿ ವೈ ರಾಘವೇಂದ್ರ|BYR

ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಹರತಾಳು ಹಾಲಪ್ಪ ರಿಗೆ ಮತ ನೀಡಿ ಬೆಂಬಲಿಸುವ ಮೂಲಕ ಸಾಗರ ಕ್ಷೇತ್ರದಿಂದ ಮಂತ್ರಿಯೊಬ್ಬರನ್ನು ಗೆಲ್ಲಿಸಲಿದ್ದೀರಿ ಎಂದು ಸಂಸದ ಬಿ ವೈ.ರಾಘವೇಂದ್ರ ಹೇಳಿದ್ದಾರೆ. ಅವರು ಸಾಗರದಲ್ಲಿ ಹರತಾಳು ಹಾಲಪ್ಪನವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಹಾಲಪ್ಪನವರು ಕಟ್ಟಕಡೆಯ ಮನುಷ್ಯನಿಗೆ ಸರ್ಕಾರದ ಕಾರ್ಯಕ್ರಮ ತಲುಪಿಸಿದವರು. ರೈತನ ಮೇಲೆ ಹಲ್ಲೆ ಆದಾಗ ರಾತ್ರಿ ಧರಣಿ ನಡೆಸಿದ್ದವರು,ಶೋಷಿತ ವರ್ಗಕ್ಕೆ ಅನ್ಯಾಯವಾದಗ ಸೆಟೆದು ನಿಂತ ನಾಯಕ ಹರತಾಳು ಹಾಲಪ್ಪ ರವರು ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ…

Read More

ರಿಪ್ಪನ್‌ಪೇಟೆ : 396 ನೇ ಶಿವಾಜಿ ಜಯಂತಿ ಆಚರಣೆ

ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಮರಾಠ ಸಮಾಜದ ಅಧ್ಯಕ್ಷ ನಾಗೇಶ್ ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್  ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ…

Read More

Ripponpete | ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಗುತ್ತಿಗೆ ಕಾರ್ಮಿಕನಿಗೆ ಗಂಭೀರ ಗಾಯ

Ripponpete | ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಗುತ್ತಿಗೆ ಕಾರ್ಮಿಕನಿಗೆ ಗಂಭೀರ ಗಾಯ ವಿದ್ಯುತ್ ಕಂಬವೇರಿದ ಗುತ್ತಿಗೆ ಕಾರ್ಮಿಕನೊಬ್ಬನಿಗೆ ಕರೆಂಟ್ ಶಾಕ್ ಆಗಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟಾಣಿಜೇಡ್ಡು ಗ್ರಾಮದಲ್ಲಿ ನಡೆದಿದೆ.  ಶಿಗ್ಗಾಂವ್ ಮೂಲದ ರಮೇಶ್(24) ಗಂಭೀರ ಗಾಯಗೊಂಡಿರುವ ವಿದ್ಯುತ್ ಗುತ್ತಿಗೆ ಕಾರ್ಮಿಕನಾಗಿದ್ದಾನೆ. ಬಟಾಣಿಜೆಡ್ಡು ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಮಗಾರಿ ನಿಮಿತ್ತ ಗುತ್ತಿಗೆ ಕಾರ್ಮಿಕ ರಮೇಶ್ ಲೈಟ್ ಕಂಬವೇರಿದ್ದು ಈ…

Read More

ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ಅಗಿ ಪ್ರವೀಣ್ ಎಸ್ ಪಿ ಅಧಿಕಾರ ಸ್ವೀಕಾರ | Ripponpete

ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ಅಗಿ ಪ್ರವೀಣ್ ಎಸ್ ಪಿ ಅಧಿಕಾರ ಸ್ವೀಕಾರ ರಿಪ್ಪನ್‌ಪೇಟೆ : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಇಂದು ಪಟ್ಟಣದ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರವೀಣ್ ಎಸ್ ಪಿ  ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಗೆ ವರ್ಗಾವಣೆಗೊಂಡಿದ್ದರು. ಕಳೆದ ನಾಲ್ಕು ತಿಂಗಳುಗಳಿಂದ ಪಟ್ಟಣದ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದ ಖಡಕ್ ಪಿಎಸ್‌ಐ ನಿಂಗರಾಜ್ ಕೆ ವೈ ಹಾವೇರಿ ಜಿಲ್ಲೆಯ ಬಂಕಾಪುರ ಪೊಲೀಸ್ ಠಾಣೆ ವರ್ಗಾವಣೆಯಾಗಿದ್ದಾರೆ….

Read More

ಅತ್ತೆಯ ಸಾವಿನ ಸುದ್ದಿ ತಿಳಿದು ಅಳಿಯ ಹೃದಯಾಘಾತದಿಂದ ನಿಧನ|sagara

ಹೃದಯಾಘಾತದಿಂದ ಸೋದರತ್ತೆಯ ಮೃತಪಟ್ಟ ಸುದ್ದಿ ತಿಳಿದು ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ. ಲಕ್ಷಮ್ಮ(58) ಮತ್ತು ಅವರ ಅಳಿಯ ಗುಲ್ಫತ್ ಸಿಂಗ್(45) ಮೃತಪಟ್ಟರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದ ಲಕ್ಷಮ್ಮರನ್ನು ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬಸ್ಸು ಆನಂದಪುರ ಸಮೀಪ ತಲುಪಿದಾಗ ಲಕ್ಷಮ್ಮರಿಗೆ ಹೃದಯಾಘಾತಕ್ಕೀಡಾಗಿದ್ದು, ಅವರು ಅಲ್ಲೇ ಮೃತಪಟ್ಟರೆನ್ನಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕ ಲಕ್ಷಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಸುದ್ದಿಯನ್ನು ಸಂಬಂಧಿಕರು ಕರೆ ಮಾಡಿ…

Read More