w
Headlines
Home » ಕಂಬವೇರಿ ರಿಪೇರಿ ಮಾಡುತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಸಾವು- ಇನ್ನಿಬ್ಬರು ಆಸ್ಪತ್ರೆಗೆ ದಾಖಲು|electric ssock

ಕಂಬವೇರಿ ರಿಪೇರಿ ಮಾಡುತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಸಾವು- ಇನ್ನಿಬ್ಬರು ಆಸ್ಪತ್ರೆಗೆ ದಾಖಲು|electric ssock

ಕಂಬವೇರಿ ರಿಪೇರಿ ಮಾಡುತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಸಾವು-  ಇನ್ನಿಬ್ಬರು ಆಸ್ಪತ್ರೆಗೆ ದಾಖಲು

ಶಿವಮೊಗ್ಗ : ರಿಪೇರಿ ಕಾರ್ಯದ ಸಂದರ್ಭ ವಿದ್ಯುತ್‌ ಶಾಕ್‌ಗೆ ಒಳಗಾಗಿ ಲೈನ್‌ ಮ್ಯಾನ್‌ ಸಾವನ್ನಪ್ಪಿದ್ದಾರೆ. ವಿದ್ಯುತ್‌ ಕಂಬದ ಮೇಲೆಯೆ ಸಿಲುಕಿದ್ದ ಅವರನ್ನು ಕೆಳಗಿಳಿಸಿ ತಕ್ಷಣದ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು.

ಮಾಚೇನಹಳ್ಳಿ ಇಂಡಸ್ಟ್ರಿಯಲ್‌ ಏರಿಯಾದ ಮೊದಲ ಅಡ್ಡರಸ್ತೆಯಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ನಲ್ಲೂರಿನ ಕಿರಣ್‌ ಅವರಿಗೆ ವಿದ್ಯುತ್‌ ಶಾಕ್‌ ತಗುಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಲೈನ್‌ ಮ್ಯಾನ್‌ ಸುನಿಲ್‌ ಎಂಬುವವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಿಪೇರಿ ಕಾರ್ಯಕ್ಕಾಗಿ ಕಿರಣ್‌ ವಿದ್ಯುತ್‌ ಕಂಬದ ಮೇಲೆ ಹತ್ತಿದ್ದರು. ಈ ವೇಳೆ ವಿದ್ಯುತ್‌ ಶಾಕ್‌ ತಗುಲಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೋರು ಶಬ್ದವಾಗಿದ್ದರಿಂದ ಸಮೀಪದ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಸ್ಥಳಕ್ಕೆ ದೌಡಾಯಿಸಿದ್ದರು. 

ವಿದ್ಯುತ್ ಲೈನ್​ ಚೇಂಜ್ ವೇಳೆ ಈ ದುರ್ಘಟನೆ ಸಂಭವಿಸಿತಾ? ಅಥವಾ ಜನರೇಟರ್​ಗಳ ವಿದ್ಯುತ್ ರಿವರ್ಸ್​ ಆಗಿ ಘಟನೆ ಸಂಭವಿಸಿತಾ ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಪೊಲೀಸ್​ ಇಲಾಖೆ ಸಿಬ್ಬಂದಿ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸ್ತಿದ್ದಾರೆ. ಇನ್ನೂ ಸಿಬ್ಬಂದಿಯೊಬ್ಬ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿರುವುದು ಲೈನ್ ಮ್ಯಾನ್​ಗಳಲ್ಲಿ ಆತಂಕ ಮೂಡಿಸಿದೆ..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.