Headlines

ಸಾಗರ : ಶಿಕ್ಷಕರ ಕೊರತೆ ಹಿನ್ನೆಲೆ ಗ್ರಾಮಸ್ಥರು ಹಾಗೂ ಎಸ್ ಡಿಎಂ ಸಿ ಸದಸ್ಯರಿಂದ ಬಿಇಒ ಕಚೇರಿ ಎದುರು ಪ್ರತಿಭಟನೆ :

ಸಾಗರ : ಮಕ್ಕಳು ಓದಿ ವಿದ್ಯಾವಂತರಾಗಲೆಂದು ಹಲವು ಕನಸುಗಳನ್ನು ಕಂಡು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ.ಆದರೆ ಶಾಲೆಯಲ್ಲಿ ಶಿಕ್ಷಕರೇ ಸರಿಯಾಗಿ ಬೋಧನೆ ಮಾಡದಿದ್ದರೆ ಮಕ್ಕಳು ವಿದ್ಯಾಭ್ಯಾಸ ಕಲಿಯುವುದು ಹೇಗೆ ಎಂಬುವುದು ಸರ್ವೇ ಸಾಮಾನ್ಯ ವಿಚಾರ.

ಆದರೆ ಇದೀಗ ಇಲ್ಲೋಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎದುರು ಹಾಗೂ ಬಿಇಒ ಕಚೇರಿ ಮುಂದೆ ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಸದಸ್ಯರು ಶಿಕ್ಷಕರ ನಿಯೋಜನೆ ಮಾಡಲೆಂದು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಐಗಿನಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂದೆ ಗ್ರಾಮದಲ್ಲಿ ಮಾದರಿ ಶಾಲೆಯಾಗಿತ್ತು.ಅಂದು ಪೋಷಕರೂ ಮಕ್ಕಳನ್ನು ಸೇರಿಸಲು ನಾಮುಂದೆ ತಾಮುಂದೆ ಎಂದು ಶಾಲೆ ಸೇರಿಸುತ್ತಿದ್ದರು ಆದರೆ ಇದೀಗ ಪೋಷಕರು ಮಕ್ಕಳನ್ನು ಈ ಶಾಲೆಗೆ ಸೇರಿಸಲೋ ಬೇಡವೋ ಎಂದು ಯೋಚನೆ ಮಾಡುವಂತಹ ಪರಿಸ್ಥಿತಿಗೆ ಈ ಶಾಲೆ ಇದೀಗ ತಲುಪಿದೆ.

ಇಲ್ಲಿ ಇಬ್ಬರು ಶಿಕ್ಷಕರನ್ನು ಸರ್ಕಾರ ನಿಯೋಜನೆ ಗೊಳಿಸಿತ್ತು ಆದರೆ ಒಬ್ಬ ಶಿಕ್ಷಕರು ಕಳೆದ 5ವರ್ಷಗಳಿಂದ ತಿಂಗಳಿಗೆ ಒಮ್ಮೆ ಅಥವಾ 2 ಬಾರಿ ಶಾಲೆಗೆ ಬಂದು ಬೋಧನೆ ಮಾಡುತ್ತಿದ್ದಾರೆ ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಹಾಗಾಗಿ ನಮ್ಮ ಶಾಲೆಗೆ ಉತ್ತಮ ಶಿಕ್ಷಕರನ್ನು ನಿಯೋಜನೆ ಮಾಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಂತೆ ಗ್ರಾಮ ಪಂಚಾಯತ್ ಸದಸ್ಯ ಆನಂದ್ ಹರಟೆ ಅವರು ಮನವಿ ಮಾಡಿದ್ದಾರೆ.
ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದ ಅವರು ಕಳೆದ 5 ವರ್ಷದಿಂದ ನಮ್ಮ ಊರಿನ ಶಾಲೆಗೆ ಇಬ್ಬರಲ್ಲಿ  ಒಬ್ಬ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಗೈರು ಹಾಜರಾಗುತ್ತಿದ್ದಾರೆ ಇದರಿಂದ ಮಕ್ಕಳಿಗೆ ಅನಾನುಕೂಲವಾಗುತ್ತಿದೆ ಸರ್ಕಾರಿ ಶಾಲೆಯನ್ನು ಎಲ್ಲರೂ ಸೇರಿ ಉಳಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ ಹಾಗಾಗಿ ತಕ್ಷಣ ನಮ್ಮ ಶಾಲೆಗೆ ಶಿಕ್ಷಕರನ್ನು ನಿಯೋಜಿಸಬೇಕೆಂದು ಮನವಿ ಮಾಡುತ್ತೆವೆ ಎಂದು ತಿಳಿಸಿದರು.



ವರದಿ:ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *