ಶಿವಮೊಗ್ಗ: ರಾಜ್ಯದಲ್ಲಿ ರೌಡಿಸಂ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೌಡಿಗಳಿಗೆ ಏನೇನು ಭಯ ಹುಟ್ಟಿಸಬೇಕೋ ಆ ಎಲ್ಲಾ ಕೆಲಸಗಳು ಮಾಡಲಾಗುತ್ತಿದೆ.ರೌಡಿಸಂ, ಮಾದಕವಸ್ತುಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವನ್ನ ಮಟ್ಟಹಾಕಬೇಕಿದೆ. ನೊಂದಿತರು ಆಕಾಶ ನೋಡದಂತೆ ಅಸಾಹಯಕರನ್ನಾಗಿ ಮಾಡಬಾರದು. ಹಾಗಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದೆ ಎಂದರು.
ಕ್ರೈಂ ಟ್ರಯಲ್ ಹಾಗೂ ಕನ್ವಿಕ್ಷನ್ ಮೂರಕ್ಕೂ ಮ್ಯಾಚ್ ಆಗುತ್ತಿಲ್ಲ ಈ ಕುರಿತು ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಪೊಲೀಸರು ಎಫ್ಐಆರ್ ಹಾಕಿ ಕೈತೆಳೆದುಕೊಳ್ಳುತ್ತೇವೆ. ಫಾಲೋ ಅಪ್ ಇಲ್ಲವೆಂದರು. ಹಾಗಾಗಿ ಕನ್ವಿಕ್ಷನ್ ರೇಟು ಕಡಿಮೆ ಇರುವ ಕುರಿತು ಸಭೆ ನಡೆಸಿದ್ದೇನೆ.
ಕೆಲ ಪ್ರಕರಣದಲ್ಲಿ 8 ತಿಂಗಳಾದರೂ ಚಾರ್ಜ್ ಶೀಟ್ ಹಾಕಿರುವುದಿಲ್ಲ. ಹಾಗಾಗಿ ಖಾಸಗಿಯವರು ಪ್ರಕರಣ ಹಿಂಬಾಲಿಸುವಂತೆ ನಾವು ಹಿಂಬಾಲಿಸುತ್ತಿಲ್ಲ. ಸಾಕ್ಷಿಗಳನ್ನ ಸಮಗ್ರವಾಗಿ ಒದಗಿಸುವಲ್ಲಿ ಇಲಾಖೆ ವಿಫಲವಾಗುತ್ತಿದೆ. ಹಾಗಾಗಿ ಅಪರಾಧಿಗಳಿಗೆ ಶಿಕ್ಷೆಯಪ್ರಮಾಣ ಕಡಿಮೆ ಆಗಿದೆ ಎಂದರು.
ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆ ಆಗುವಂತೆ ಮಾಡಲು ಪ್ರತಿ ತಿಂಗಳು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಸೈಬರ್ ಕ್ರೈಂ ನಲ್ಲಿ ಹಣ ಹೆಚ್ಚು ಕಳೆದುಕೊಳ್ಳುತ್ತಿದ್ದು, ಇದಕ್ಕಾಗಿ ಸೈಬರ್ ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆ ಬಹಳದೊಡ್ಡಮಟ್ಟದಲ್ಲಿ ಬಲಪಡಿಸುತ್ತಿದ್ದೇವೆ ಎಂದರು.
ಇನ್ಫೋಸಿಸ್ ಸಂಸ್ಥೆಯೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಬೇರೆ ರಾಜ್ಯದವರು ನಮ್ಮ ಇಲಾಖೆಯೊಂದಿಗೆ ತರಬೇತಿ ಪಡೆಯುವಂತೆ ಇಲಾಖೆ ಈಗ ಸಧೃಢವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಸೈಬರ್ ತಡೆಉಪಕರಣಗಳನ್ನ ಅಳವಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದ ಅವರು ಶಿವಮೊಗ್ಗದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಿಸಲು ಕೆಲ ಅಡಚಣೆ ಇದೆ. ಜನ ಸಂಖ್ಯೆಯ ಕೊರತೆ ಇದೆ. ಭದ್ರಾವತಿಯನ್ನ ಸೇರಿಸಿಕೊಂಡು ಆಯುಕ್ತಾಲಯ ನಿರ್ಮಿಸಲಾಗುವುದು ಎಂದರು.