ಕುವೆಂಪುರವರ ವಿಚಾರದಾರೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ನಡವಳಿಕೆಗಳಲೂ ಬದಲಾವಣೆ ಮಾಡಿಕೊಳ್ಳೋಣ : ಎಂ ಬಿ ಲಕ್ಷ್ಮಣಗೌಡ
ರಿಪ್ಪನ್‌ಪೇಟೆ : ಇಲ್ಲಿನ ವಿಶ್ವಮಾನವ ಕಲ್ಯಾಣ ಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಅವರ 118ನೇ ಜನ್ಮ ದಿನಾಚರಣೆಯನ್ನು ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣ ಗೌಡ ಕೇವಲ ಮನುಷ್ಯ ಅಥವಾ ಮಾನವರಾಗದೆ ವಿಶ್ವಮಾನವರಾಗೋಣ ಎಂದು ಕುವೆಂಪು ಸಂದೇಶ ನೀಡಿದ್ದಾರೆ ಇಂತಹ ಮಹನೀಯರನ್ನು ಭಾವಚಿತ್ರಕ್ಕೆ ಅಷ್ಟೆ ಸೀಮಿತಗೊಳಿಸದೆ ಅವರ ವಿಚಾರದಾರೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ನಡವಳಿಕೆಗಳಲೂ ಬದಲಾವಣೆ ಮಾಡಿಕೊಳ್ಳೋಣ,ಆಧ್ಯಾತ್ಮಿಕವಾಗಿ ಧರ್ಮವನ್ನು ರಾಷ್ಟ್ರ ಕವಿ ಕುವೆಂಪು ಅವರು ಒಪ್ಪಿಕೊಂಡಿದ್ದರು…