ಫೇಸ್ಬುಕ್ ನಲ್ಲಿ ಪರಿಚಯ,ಸಲುಗೆ – ಆಮೇಲೆ ಆಗಿದ್ದು ಅವಾಂತರ | ಹನಿಟ್ರ್ಯಾಪ್ ಕೇಸ್ ಗೆ ಟ್ವಿಸ್ಟ್


ತೀರ್ಥಹಳ್ಳಿ : ಫೇಸ್ಬುಕ್ ನಲ್ಲಿ ಪರಿಚಯಯವಾಗಿ ಸ್ನೇಹ ಸಲುಗೆ ನಂತರ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿರುವುದಾಗಿ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಪ್ರತಿ ದೂರು ದಾಖಲಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಆಗುಂಬೆ ಸಮೀಪದ ಗ್ರಾಮವೊಂದರ ಪುರುಷ ಹಾಗೂ ಮಹಿಳೆ ಫೇಸ್ಬುಕ್ ನಲ್ಲಿ ಪರಿಚಯವಾಗಿ ನಂತರ ಚಾಟ್ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಕಾಲ್ ಸಹ ಮಾಡಿಕೊಂಡಿದ್ದಾರೆ. ಈ ವಿಚಾರ ಮಹಿಳೆಯ ಗಂಡನಿಗೆ ತಿಳಿದು ಆತನಿಗೆ ನಿನ್ನ ಅಶ್ಲೀಲ ವಿಡಿಯೋ ಇದ್ದು ಹಣ ನೀಡಲು ಕೇಳಿದ್ದಾನೆ. ಆಗ ಆ ಪುರುಷ ಆಗುಂಬೆ ಪೊಲೀಸ್ ಠಾಣೆಯಲ್ಲಿ ಬೆದರಿಕೆ ನೀಡುತ್ತಿರುವುದಾಗಿ ದೂರು ನೀಡಿದ್ದಾನೆ.
ಇತ್ತ ಮಹಿಳೆ ಹಾಗೂ ಮಹಿಳೆ ಗಂಡ ಫೇಸ್ಬುಕ್ ನಲ್ಲಿ ಪರಿಚಯವಾದ ಪುರುಷ ಅಶ್ಲೀಲ ಮೆಸೇಜ್ ಹಾಗೂ ಫೋಟೋ ವಿಡಿಯೋ ಮಾಡುತ್ತಿದ್ದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ ಅಷ್ಟೇ ಅಲ್ಲದೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಈ ವಿಚಾರವನ್ನು ಹನಿಟ್ರ್ಯಾಪ್(honeytrap) ಅನ್ನಬೇಕೋ ಇದರಲ್ಲಿ ಯಾರದ್ದು ತಪ್ಪೋ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
