January 11, 2026

ಇನ್ಸ್ಟಾಗ್ರಾಮ್ ನಲ್ಲಿ ಚಿಗುರಿದ ಪ್ರೀತಿ – ಮದುವೆಗೆ ಒಪ್ಪದ ಯುವತಿ | ಸಲುಗೆಯ ಪೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್

ಇನ್ಸ್ಟಾಗ್ರಾಮ್ ನಲ್ಲಿ ಚಿಗುರಿದ ಪ್ರೀತಿ – ಮದುವೆಗೆ ಒಪ್ಪದ ಯುವತಿ | ಸಲುಗೆಯ ಪೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್

ತೀರ್ಥಹಳ್ಳಿ : ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ಅಲ್ಲಿ ಪರಿಚಯವಾಗಿ ನಂತರ ಪ್ರೀತಿಯಾಗಿ ಅಲ್ಲಿಂದ ಮದುವೆಗೆ ಒಪ್ಪದ ಕಾರಣದ ವಿಚಾರವಾಗಿ ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಮೂರು ವರ್ಷದ ಹಿಂದೆ  ರಾಮನಗರದ ಯುವಕನೊಂದಿಗೆ ತೀರ್ಥಹಳ್ಳಿಯ ಯುವತಿಗೆ ಪರಿಚಯವಾಗಿತ್ತು.  ಆ ಪರಿಚಯ  ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು. ಯಾವಾಗ ಪ್ರೀತಿ ಮನೆಯಲ್ಲಿ ತಿಳಿಯುತ್ತದೆಯೋ ಆಗ ಯುವತಿಯ ಮನೆಯವರು ಅಕ್ಷೆಪಿಸಿದ್ದಾರೆ.

ಮನೆಯವರ ಆಕ್ಷೇಪಣೆಯಿಂದ ಹಿಂದೆ ಸರಿದ ಯುವತಿಗೆ ಯುವಕ ಅನೇಕ ಬಾರಿ ಸಂಪರ್ಕಿಸಲು ಪ್ರಯತ್ನಿಸಿದ್ದಾನೆ. ಯುವತಿ ಮದುವೆಯಿಂದ ಹಿಂದೆ ಸರಿದ ವಿಷಯ ತಿಳಿಯುತ್ತಿದ್ದಂತೆ ಸೇಡಿಗೆ ನಿಂತ ಯುವಕ ಯುವತಿ ಜೊತೆಗೆ ಸಲುಗೆಯಿಂದ ಇದ್ದ ಫೊಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.

ಬರಿ ಫೋಟೋ ಅಷ್ಟೇ ಅಲ್ಲದೆ ಆಕೆಯ ಅಶ್ಲೀಲ ಫೊಟೊಗಳನ್ನ ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದಾನೆ. ಯುವಕನಿಗೆ ಬುದ್ದಿವಾದ ಹೇಳಲು ಬಂದ ಯುವತಿಯ ಕುಟುಂಬಸ್ಥರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದು ಕೊಲೆ ಬೆದರಿಕೆ ಸಹ ಹಾಕಿರುವುದಾಗಿ ಯುವತಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ

About The Author