WhatsApp Channel Join Now
Telegram Channel Join Now
ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಯ ಗೈಡ್ ಲೈನ್ಸ್ ಹೇಗಿದೆ ?
ಶಿವಮೊಗ್ಗ : ಡಿ. 31ರ ರಾತ್ರಿ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆಯು ಸ್ಪಷ್ಟ ಗೈಡ್ ಲೈನ್ಸ್ ನ್ನು ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.
ಇಂದು ಜಿಲ್ಲಾ ರಕ್ಷಣಾಧಿಕಾರಿಗಳ ಕಛೆರಿಯಲ್ಲಿ ಹೊಸ ವರ್ಷಾಚರಣೆ ಸಂಬಂಧ ಸಂಬಂಧ ನಡೆದ ಹೋಟೆಲ್ ಗಳು, ಕ್ಲಬ್ ಗಳು ಮತ್ತು ರೆಸೋರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವಿವಿಧ ನೀತಿ ನೀಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದಾರೆ.

ಗೈಡ್ ಲೈನ್ಸ್ ಏನು ?
ಸರ್ಕಾರದ ಆದೇಶದ ಅನ್ವಯ ಹೊಸ ವರ್ಷ ಆಚರಣೆಯನ್ನು ಜ. 1ರ ಬೆಳಗಿನ ಜಾವ 1ಗಂಟೆಯ ಒಳಗಾಗಿ ಮುಕ್ತಾಯಗೊಳಿಸುವುದು.
ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು.
ಸಂಭ್ರಮಾಚರಣೆಯ ವೇಳೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು.
ಮಧ್ಯ ಮಾರಾಟವನ್ನು ರಾತ್ರಿ 11.30 ರವರೆಗೆ ಮಾತ್ರ ಮಾಡುವುದು.
ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, ಮಧ್ಯಪಾನ ಮಾಡದೇ ಇರುವವರು ಚಾಲನೆ ಮಾಡುವುದು.
ನಿಗದಿ ಪಡಿಸಿದ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂ ಗಳನ್ನು ಬಳಸುವಂತಿಲ್ಲ.
ಸಂಭ್ರಮಾಚರಣೆಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು.
ಗುಂಪನ್ನು ನಿಯಂತ್ರಿಸುವ ಸಂಬಂಧ ಒಂದಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳನ್ನು ನಿರ್ಮಿಸುವುದು.
ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಸುವುದು.
60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸದೇ ಇರುವುದು ಸೂಕ್ತವಾಗಿರುತ್ತದೆ.
ನೋ ಮಾಸ್ಕ್ ನೋ ಎಂಟ್ರಿ ಬೋರ್ಡ್ ಗಳನ್ನು ಸಾರ್ವಜನಿಕರವಾಗಿ ಎದ್ದು ಕಾಣುವ ರೀತಿಯಲ್ಲಿ ಹಾಕುವುದು.
ಹೊಸ ವರ್ಷ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಕಡ್ಡಾಯವಾಗಿ ಥರ್ಮಲ್ ಸ್ರ್ಕೀನಿಂಗ್ ಗೆ ಒಳಪಡಿಸುವುದು.
ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ಮೊ. 9480803300, 08182 261413 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡುವುದು. ಈ ಸಂದರ್ಭದಲ್ಲಿ ಡಿವೈಎಸ್‌ಪಿ, ಡಿ ಸಿ ಆರ್ ಬಿ, ಮತ್ತು ಡಿ ವೈ ಎಸ್ ಪಿ ಶಿವಮೊಗ್ಗ ಉಪ ವಿಭಾಗ, ಪೊಲೀಸ್ ನಿರೀಕ್ಷಕರವರು ಹಾಜರಿದ್ದರು.

Leave a Reply

Your email address will not be published. Required fields are marked *