ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ :
ಹೊಸನಗರ ವಿಧಾನಸಭಾ ಕ್ಷೇತ್ರವು ತಾಲ್ಲೂಕಿನಲ್ಲಿ 2001 ರ ಹಿಂದೆ ಅಸ್ತಿತ್ವದಲ್ಲಿತ್ತು. ಆದರೆ ನಂತರದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ಸಮಯದಲ್ಲಿ ಹೊಸನಗರ ಕ್ಷೇತ್ರವನ್ನು ತೀರ್ಥಹಳ್ಳಿ ಮತ್ತು ಸಾಗರ ಕ್ಷೇತ್ರಕ್ಕೆ ಸೇರಿಸಿ ಹೊಸನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಾಗಿತ್ತು. ಇಂದು ಹೊಸನಗರ ತಾಲ್ಲೂಕಿನ ಎಲ್ಲ ಪಕ್ಷದ ನಾಯಕರು ಪಕ್ಷಾತೀತವಾಗಿ ಪಾಲ್ಗೊಂಡು ಮಾಜಿ ಶಾಸಕ ಬಿ.ಸ್ವಾಮಿರಾವ್ ರವರ ನೇತೃತ್ವದಲ್ಲಿ ಹಳೇ ಕೋರ್ಟ್ ರಸ್ತೆಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಹೊಸನಗರದ ತಹಶೀಲ್ದಾರ್ ಕಛೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು….