ಅಳಿಯನಿಂದ ಮಾವನ ಹತ್ಯೆ
ಹೊಳೆಹೊನ್ನೂರು : ಇಲ್ಲಿನ ಸಮೀಪದ ಹನುಮಂತಾಪುರ ಗ್ರಾಮದಲ್ಲಿ ವಯಕ್ತಿಕ ಕಾರಣಕ್ಕಾಗಿ ರಾಜಪ್ಪ(55) ಎಂಬ ವ್ಯಕ್ತಿಯನ್ನು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ.
ಅರೋಪಿ ಮಂಜುನಾಥ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ರಾಜಪ್ಪನ ಮಗಳು ಮನೆಗೆ ಹೋಗಿ ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಶಂಕೆಯಿದೆ.
ಮಂಜುನಾಥನು ಮೃತ ರಾಜಪ್ಪ ಅವರ ಅಳಿಯ ಅಂದರೆ ಮಗಳ ಪತಿ ಆಗಿದ್ದಾನೆ. ಆರೋಪಿ ಮಂಜುನಾಥನು ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಜೈಲಿನಲ್ಲಿದ್ದು ಬಂದಿದ್ದು ಈತನ ವಿರುದ್ಧ ಇನ್ನು ಅನೇಕ ಕ್ರಿಮಿನಲ್ ಕೇಸುಗಳು ದಾಖಲಾಗಿವೆ.