Ripponpete | ಗ್ರಾಮ ಒನ್ ಕೇಂದ್ರದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಸುಲಿಗೆ – ಲೈಸೆನ್ಸ್ ರದ್ದುಗೊಳಿಸುವಂತೆ ಮನವಿ

Ripponpete | ಗ್ರಾಮ ಒನ್ ಕೇಂದ್ರದಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಸುಲಿಗೆ – ಲೈಸೆನ್ಸ್ ರದ್ದುಗೊಳಿಸುವಂತೆ ಮನವಿ


ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಗ್ರಾಮ್ ಒನ್ ಕೇಂದ್ರದಲ್ಲಿ ರೈತರು ತಮ್ಮ ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಲು ಹೋದರೆ ಹೆಚ್ಚುವರಿ ಹಣವನ್ನು ಸುಲಿಗೆ ಮಾಡುತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ.

ಸಾಗರ ರಸ್ತೆಯಲ್ಲಿರುವ ಯಲ್ಲಪ್ಪ ಎಂಬುವವರ ಗ್ರಾಮ ಒನ್ ಕೇಂದ್ರದಲ್ಲಿ ತಮ್ಮ ಅಗತ್ಯ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಲು ಹೋಗುವ ಗ್ರಾಹಕರುಗಳ ಬಳಿಯಲ್ಲಿ ಬೇಕಾಬಿಟ್ಟಿ ಶುಲ್ಕವನ್ನು ವಸೂಲಿ ಮಾಡುತಿದ್ದು, ಸರ್ಕಾರದ ನಿಯಮದಂತೆ ಯಾವ ಅರ್ಜಿಗೆ ಎಷ್ಟು ಶುಲ್ಕ ಪಾವತಿಸಬೇಕು ಎಂಬ ನಾಮಫಲಕವನ್ನು ಅಳವಡಿಸದೇ  ನಿರ್ಲಕ್ಷ್ಯ ವಹಿಸಿದ್ದಾರೆ.

ಬಡ ರೈತರ ಬಳಿ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದರೇ ಬೇಕಾದರೆ ಮಾಡಿಸು ಇಲ್ಲದಿದ್ದಲ್ಲಿ ಹೋಗು ನಾನು ನಮ್ಮ ಮೇಲಾಧಿಕಾರಿಗೆ ಹಣ ನೀಡಬೇಕು ಎಂದು ಉಢಾಫೆಯ ಮಾತುಗಳನ್ನಾಡುತ್ತಾನೆ.

ಬಡವರ ಬಳಿ ಸರ್ಕಾರಿ ಕೆಲಸಕ್ಕಾಗಿ ಸುಲಿಗೆ ಮಾಡುತ್ತಿರುವ ಸಾಗರ ರಸ್ತೆಯ ಯಲ್ಲಪ್ಪ ಎಂಬುವವರ ಗ್ರಾಮ ಒನ್ ಕೇಂದ್ರವನ್ನು ರದ್ದುಗೊಳಿಸಬೇಕೆಂದು ಗ್ರಾಪಂ ಸದಸ್ಯ ಡಿ ಇ ಮಧುಸೂಧನ್ ,ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶ್ರೀಧರ್ ಪಟ್ಟಣದ ನಾಡಕಛೇರಿಯಲ್ಲಿ ಉಪ ತಹಶೀಲ್ದಾರ್ ಹುಚ್ಚುರಾಯಪ್ಪ ರವರಿಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *