w
Headlines
Home » ಮಣಿಪುರದಲ್ಲಿ ಮಡಿದ ರಿಪ್ಪನ್‌ಪೇಟೆ ಯೋಧನಿಗೆ ಯುವ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ|Tribute

ಮಣಿಪುರದಲ್ಲಿ ಮಡಿದ ರಿಪ್ಪನ್‌ಪೇಟೆ ಯೋಧನಿಗೆ ಯುವ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ|Tribute

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಬೆಳಗಿನಜಾವ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದಾಗ ಮರಣವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ರವರಿಗೆ ಶದ್ಧಾಂಜಲಿ ಅರ್ಪಿಸಲಾಯಿತು.




ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ರಿಪ್ಪನ್‌ಪೇಟೆಯ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿರುವುದು ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಯುವ ಕಾಂಗ್ರೆಸ್ ಸಾಗರ ತಾಲೂಕು ಅಧ್ಯಕ್ಷ ಅಶೋಕ ಬೇಳೂರು ಹೇಳಿದರು.




ಈ ಸಂಧರ್ಭದಲ್ಲಿ ರಾಷ್ಟೀಯ ಯುವ ಕಾಂಗ್ರೆಸ್ ನ ಸಾಗರ ಅಸೆಂಬ್ಲಿ ಯುವ ಕಾಂಗ್ರೆಸ್ ಇನ್ಚಾರ್ಜ್ ಅಭಿನವ್ ಕುಮಾರ್, ಸಕ್ಷಮ್, ಯುವ ಕಾಂಗ್ರೆಸ್ ಮುಖಂಡರಾದ ಮಹಾಬಲ ಶೆಟ್ಟಿ, ಸಿಎಂ ಚಿನ್ಮಯ್, ಪೃಥ್ವಿ, ಪ್ರದೀಪ್, ಟೈಬು ರಾಘು, ಆನಂದ್, ಚರಣ್, ಮಧು, ಸುಧಾಕರ್ ಹಾಗು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.





 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.