ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ : ವಿಡಿಯೋ ಸಹಿತ ಬಿಜೆಪಿಗೆ ಭದ್ರಾವತಿ ಶಾಸಕ ತಿರುಗೇಟು
ಸ್ವಾತಂತ್ರ್ಯ ದಿನಾಚರಣೆ ದಿನವಾದ ಸೋಮವಾರ ಸಂಜೆ ಸಾವರ್ಕರ್ ಫ್ಲೆಕ್ಸ್ ತೆರವು ವಿವಾದದಲ್ಲಿ ಪ್ರೇಮ್ಸಿಂಗ್ ಎಂಬಾತನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಪ್ರಕ್ಷ್ಯಬ್ಧ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಬೆನ್ನಲ್ಲೇ ಅಂದರೆ ಮಂಗಳವಾರ ಭದ್ರಾವತಿಯಲ್ಲಿ ಹಿಂದು ಯುವಕ ಸುನೀಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ ನಡೆದಿತ್ತು. ಇದು ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ, ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಇದೀಗ ಸುನೀಲ್ ಮೇಲಿನ ಹಲ್ಲೆ ಪ್ರಕರಣ ಕುರಿತು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಭದ್ರಾವತಿ…
