Headlines

ಹೃದಯಾಘಾತದಿಂದ ರೈತ ಸಾವು : ಅರಣ್ಯಾಧಿಕಾರಿಗಳ ಕಿರುಕುಳವೇ ರೈತನ ಸಾವಿಗೆ ಕಾರಣ : ಆರ್ ಎಂಎಂ ಮತ್ತು ಬೇಳೂರು ಆರೋಪ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ನೆಣೆಬಸ್ತಿ ಗ್ರಾಮದ ರೈತ ಶಬ್ಬೀರ್ ಅಹಮದ್ (71) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು ಈ ಸಾವಿಗೆ  ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಕಾರಣ ಎಂದು ಜಂಟಿ ಪತ್ರೀಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಹಾಗೂ ಮಾಜಿ ಶಾಸಕ,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.


ಹಲವಾರು ದಶಕಗಳಿಂದ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಅರಣ್ಯ ಒತ್ತುವರಿ ಜಾಗ ತೆರವಿಗೆ ಅರಣ್ಯ ಇಲಾಖೆ ನೋಟೀಸ್ ಕೊಟ್ಟ ಹಿನ್ನಲೆಯಲ್ಲಿ ಶಬ್ಬೀರ್ ಅಹಮದ್ ಮಾನಸಿಕವಾಗಿ‌ ನೊಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.



ಮೃತ ಶಬ್ಬೀರ್ ಅಹಮದ್ ರವರ ಮನೆಗೆ ಭೇಟಿ ನೀಡಿ ಆರ್ ಎಂ ಮಂಜುನಾಥ್ ಗೌಡ ಮತ್ತು ಬೇಳೂರು ಗೋಪಾಲಕೃಷ್ಣ ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿ ಸ್ಥಳದಲ್ಲಿಯೇ ಪತ್ರೀಕಾ ಗೋಷ್ಠಿ ನಡೆಸಿದ ಅವರು ಹಲವಾರು  ದಶಕಗಳಿಂದ ಶಿವಮೊಗ್ಗ ಜಿಲ್ಲೆಯ ಒಂದು ಲಕ್ಷಕ್ಕೂ ರೈತ ಕುಟುಂಬದವರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡಿದ್ದಾರೆ.ಅವರುಗಳಿಗೆ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳು ಹಗಲಿರುಳೆನ್ನದೇ ಕಿರುಕುಳ ನೀಡುತಿದ್ದಾರೆ.

ನಾವುಗಳ ಬಡವರ ಪರ ,ರೈತರ ಪರ ಎಂದು ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅರಣ್ಯ ಒತ್ತುವರಿ ಮಾಡಿ ರೈತಾಪಿ ಚಟುವಟಿಕೆಗಳನ್ನು ನಡೆಸುತ್ತಿರು ರೈತರುಗಳನ್ನು ಅರಣ್ಯ ಜಾಗಕ್ಕೆ ಒಕ್ಕಲೆಬ್ಬಿಸುತ್ತೇವೆ ಎಂಬ ನೋಟೀಸ್ ನೀಡಿ ಭಯವನ್ನುಂಟು ಮಾಡುತ್ತಿದ್ದಾರೆ.ರಾಜ್ಯದ ಹಲವಾರು ಮಂತ್ರಿಗಳು ಹಾಗೂ ಶಾಸಕರುಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದರೂ ಸಹ ಅವರುಗಳಿಗೆ ಯಾವುದೇ ಅಡ್ಡಿ ಆತಂಕವಿಲ್ಲ.ರಾಜ್ಯದಲ್ಲಿನ ಸಣ್ಣಪುಟ್ಟ ರೈತರುಗಳು ತಮ್ಮ ಜೀವನೋಪಾಯಕ್ಕಾಗಿ ಅರಣ್ಯ ಒತ್ತುವರಿ ಮಾಡಿಕೊಂಡು ತಮ್ಮ ಬದುಕನ್ನು ಸವೆಸುತಿದ್ದಾರೆ ಅಂತವುಗಳಿಗೆ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳು ಕಿರುಕುಳ ಕೊಡುವುದಕ್ಕೆ ಆರ್ ಎಂ ಮಂಜುನಾಥ್ ಗೌಡ ಮತ್ತು ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ ನೀಡಲು ಒತ್ತಾಯ:

ಅರಣ್ಯ ಅಧಿಕಾರಿಗಳ ಕಿರುಕುಳದಿಂದ ಹೃದಯಾಘಾತಕ್ಕೆ ಬಲಿಯಾ ರೈತ ಶಬ್ಬೀರ್‌ ಅಹಮದ್ ರವರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೇಯೇ ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡುವುದರ ಮೂಲಕ ಅವರುಗಳ ರಕ್ಷಣೆಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಈ ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎಂ ಪರಮೇಶ್ ,ಅಮೃತ ಗ್ರಾಪಂ ಮಾಜಿ ಅಧ್ಯಕ್ಷ ಬಷೀರ್ ಅಹಮದ್ ,ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ,ಹೆದ್ದಾರಿಪುರ ಗ್ರಾಪಂ ಸದಸ್ಯ ಷಣ್ಮುಖ ಯಡಗುಡ್ಡೆ,ಹೊಸಹಳ್ಳಿ ಶಿವು ಹಾಗೂ ಇನ್ನಿತರರಿದ್ದರು.

ಘಟನೆಯ ಹಿನ್ನಲೆ :

ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಣೆಬಸ್ತಿ ವಾಸಿ ಶಬ್ಬೀರ್ ಅಹಮದ್ ಕುಟುಂಬದವರು ಕಳೆದ 60 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತಿದ್ದರು.ಈ ಕುಟುಂಬಕ್ಕೆ ಹೊಸನಗರ ತಾಲೂಕ್ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಮೀನನ್ನು ತೆರವುಗೊಳಿಸುವುದಾಗಿ 06-09-2022 ರಂದು ಶಬ್ಬೀರ್ ಅಹಮದ್ ರವರಿಗೆ ನೋಟಿಸ್ ನೀಡಿದ್ದರು.

ಈ ಹಿನ್ನಲೆಯಲ್ಲಿ ಅವರು ಹೊಸನಗರ ಅರಣ್ಯ ಇಲಾಖೆಯ ಕಛೇರಿಗೆ ತೆರಳಿ ಸಂಬಂಧಪಟ್ಟ ನೋಟೀಸ್ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ ಅವರುಗಳು ಸರ್ಕಾರದ ಆದೇಶ ಪಾಲನೆ ಅನಿವಾರ್ಯ ಹಾಗೂ ಒತ್ತುವರಿ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಮನನೊಂದು ಮಾನಸಿಕ ಅಘಾತ ಉಂಟಾಗಿ ಮನೆಯಲ್ಲಿದ್ದ ಸಂಧರ್ಭದಲ್ಲಿ ಸ್ಥಳೀಯ ಅರಣ್ಯ ರಕ್ಷಕರೊಬ್ಬರು ಇವರ ಮನೆಗೆ ಬಂದು ನಿಮ್ಮ ಅರಣ್ಯ ಒತ್ತುವರಿ ಜಾಗವನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವಿಚಾರದಿಂದ ಶಬ್ಬೀರ್ ಅಹಮದ್ ಅವರಿಗೆ ಬೇಸರ ಉಂಟಾಗಿ ಮಾನಸಿಕವಾಗಿ ನೊಂದು‌ ಅರಣ್ಯ ಅಧಿಕಾರಿಗಳ ಕಿರುಕುಳದಿಂದ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *