Headlines

ರಿಪ್ಪನ್‌ಪೇಟೆ ಸ್ನೇಹ ಬಳಗದ ವತಿಯಿಂದ ಮಾನವೀಯ ಕಾರ್ಯ

ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಇಂದು ಪಟ್ಟಣದ ಹಲವು ಕಡೆ ಮಾನವೀಯ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.

ಇತ್ತೀಚೆಗೆ 1995 96ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇಂದು ಹೊರ ದೇಶಗಳಲ್ಲಿ & ಹೊರ ರಾಜ್ಯಗಳಲ್ಲಿ ಮತ್ತು ರಿಪ್ಪನ್ ಪೇಟೆಯ ಸುತ್ತಮುತ್ತಲೂ ಇರುವ ಸ್ನೇಹಿತರನ್ನು ಒಳಗೊಂಡು ಪಟ್ಟಣದ ಸುತ್ತಮುತ್ತಲಿನ ನೊಂದ ಕುಟುಂಬಕ್ಕೆ ಆಸರೆಯಾಗುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.


ಹಾಲುಗುಡ್ಡೆಯ ರಾಘವೇಂದ್ರ ಎಂಬುವರ ಮನೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು.ಅವರಿಗೆ ಸ್ನೇಹ ಬಳಗದ ವತಿಯಿಂದ ಮನೆ ನಿರ್ಮಾಣಕ್ಕೆ ಅಗತ್ಯವಾದ 500 ಇಟ್ಟಿಗೆ ಸಾಮಾಗ್ರಿಗಳನ್ನು ನೀಡಲಾಯಿತು.

ಇತ್ತೀಚೆಗೆ ರಿಪ್ಪನ್ ಪೇಟೆಯಲ್ಲಿ ನಡೆದ ಆಟೋ ಅಪಘಾತದ ದುರ್ಘಟನೆಯಲ್ಲಿ ದುರ್ಮರಣಕ್ಕೆ ಒಳಗಾದ ಶಬರೀಶನಗರದ ದಿ|| ಶೀನಿವಾಸ್ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಅವರ ಎರಡು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಮಾಡಲಾಯಿತು ಮತ್ತು ಕುಟುಂಬ ವರ್ಗಕ್ಕೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು ಮತ್ತು ರಿಪ್ಪನ್ ಪೇಟೆಯ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೂ ಸಹ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ sslc ವಿದ್ಯಾರ್ಥಿಗಳ ಸ್ನೇಹ ಬಳಗದ ಎಲ್ಲಾ ಸ್ನೇಹಿತರ ಉಪಸ್ಥಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *